ಮೈಸೂರು

ಬೆಳದಿಂಗಳ ಕಾರ್ಯಕ್ರಮದಲ್ಲಿ ವಿದುಷಿ ವೃಂದಾ ಆಚಾರ್ಯರಿಂದ ಗಾಯನ ಕಛೇರಿ

ಮೈಸೂರು,ಮಾ.26 : ಸುತ್ತೂರಿನ ಮಠದಲ್ಲಿ ನಡೆಯುವ ಬೆಳದಿಂಗಳ ಸಂಗೀತ -198ರಲ್ಲಿ ವಿದುಷಿ ಕೆ.ವೃಂದಾ ಆಚಾರ್ಯ ಅವರ ಗಾಯನ ಕಾರ್ಯಕ್ರಮವನ್ನು ಮಾ.31ರ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ವಿದುಷಿ ವಿ.ನಳಿನಾ ಮೋಹನ್ ಅವರ ಶಿಷ್ಯೆಯಾಗಿರುವ ವಿದುಷಿ ವೃಂದಾ ಆಚಾರ್ಯ ಅವರು ಪ್ರತಿಷ್ಠಿತ ವೇದಿಕೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸೋದಾಹರಣ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳಿಂದ ಜನಪ್ರಿಯರಾಗಿದ್ದಾರೆ. ಶಾಸ್ತ್ರೀಯ ಹಾಗೂ ಭಕ್ತಿ ಸಂಗೀತದಲ್ಲಿ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾಗಿದ್ದು, ವೃತ್ತಿಯಲ್ಲಿ ಬೋಧಕರಾಗಿದ್ದಾರೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಂಗೀತ ಕಛೇರಿ ಸಾನಿಧ್ಯ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: