ಮೈಸೂರು

ಆಕ್ರೋಶ್ ದಿನಕ್ಕೆ ಆಮ್ ಆದ್ಮಿ ಪಕ್ಷದ ಬೆಂಬಲ: ಪ್ರತಿಭಟನೆ

ಮೈಸೂರಿನ ಆರ್.ಟಿ.ಓ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆಕ್ರೋಶ್ ದಿನವನ್ನು ಬೆಂಬಲಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರು ಮಾತನಾಡಿ, ಕೇಂದ್ರ ಸರ್ಕಾರ ನೋಟನ್ನು ರದ್ದುಗೊಳಿಸಿದ್ದು, ಇದು ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾಗಿದೆ. ಈ ಯೋಜನೆಯು ಭ್ರಷ್ಟಾಚಾರ ಅಥವಾ ಕಪ್ಪು ಹಣವನ್ನು ಕಡಿಮೆಗೊಳಿಸುವುದಕ್ಕಲ್ಲ, ಬದಲಾಗಿ ಎಂಟು ಲಕ್ಷ ಕೋಟಿ ರೂ. ಲೂಟಿ ಮಾಡುವುದಕ್ಕಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ವಿ. ಮಾಲವಿಕ, ಬೆಂಗಳೂರು ಉತ್ತರ ಸಂಚಾಲಕಿ ಉಷಾಸಂಪತ್ ಕುಮಾರ್, ಹುಣಸೂರು ಸಂಚಾಲಕ ಸತ್ವಿರ್ ಸಿಂಘ್ ಲೋಹಿಯಾ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: