ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು,ಮಾ.27:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಭುವನೇಶ್ವರಿ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 27 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಂಜನಗೂಡು ರಸ್ತೆ, ಜೆ.ಎಸ್‍ಎಸ್. ಆಸ್ಪತ್ರೆ, ಜೆ.ಎಸ್‍ಎಸ್. ಮಠ, ಬೆಟ್ಟದ ಪಾದ, ರೇಸ್ ಕೋರ್ಸ್ ಹಿಂಭಾಗ, ತಾವರೆ ಕಟ್ಟೆ, ಜಾಕಿ ಕ್ವಾರ್ಟಸ್, ಊಟಿ ರಸ್ತೆ, ಸಚ್ಚಿದಾನಂದ ಆಶ್ರಮ, ದತ್ತನಗರ, ಗೌರಿಶಂಕರ ನಗರ, ಭೈರವೇಶ್ವರ ನಗರ, ಗುಂಡುರಾವ್ ನಗರ, ಟೋಲ್ ಗೇಟ್‍ವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: