ಕರ್ನಾಟಕ

ಮಲೆ ಮಹದೇಶ್ವರ ಬೆಟ್ಟಕ್ಕೆ ಹುಸಿ ಬಾಂಬ್ ಬೆದರಿಕೆಯ ಅನಾಮಧೇಯ ಪತ್ರ

ರಾಜ್ಯ(ಚಾಮರಾಜನಗರ)ಮಾ.27:- ಚಾಮರಾಜನಗರ ಜಿಲ್ಲೆಯ ಪವಿತ್ರ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಹುಸಿ ಬಾಂಬ್ ಬೆದರಿಕೆಯ ಅನಾಮಧೇಯ ಪತ್ರವೊಂದು ಬಂದಿದೆ ಎನ್ನಲಾಗಿದೆ.

ಅನಾಮಧೇಯ ಪತ್ರದ ಮೂಲಕ ಬಾಂಬ್ ಬೆದರಿಕೆಯೊಡ್ಡಲಾಗಿದ್ದು, ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರಕ್ಕೆ ಅನಾಮಧೇಯ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಈ ಕುರಿತು ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆದಿದೆ. ತಪಾಸಣೆ ಬಳಿಕ ಪತ್ರದ ಸಾರಾಂಶ ಹುಸಿಯಾಗಿದ್ದು, ಅಂಚೆಕಾರ್ಡ್ ಶಿವಮೊಗ್ಗದಿಂದ ಬಂದಿದೆ ಎನ್ನಲಾಗಿದೆ. ಅಂಚೆ ಕಾರ್ಡ್ ವಿಳಾಸ  ಬೆನ್ನತ್ತಿ   ಪೊಲೀಸರು ಶಿವಮೊಗ್ಗಕ್ಕೆ ತೆರಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: