ಮೈಸೂರು

ಕಾಂಗ್ರೆಸ್ ನಿಂದ ಟಿಕೆಟ್ ಆಗ್ರಹಿಸಿದ ಅದಿವಾಸಿ ಮುಖಂಡ

ಮೈಸೂರು,ಮಾ.27 : ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕೋಟೆ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಬೇಕೆಂದು ಆದಿವಾಸಿ ಸಮುದಾಯಗಳ ಸಾಮಾಜಿಕ ನ್ಯಾಯ ಸಮಿತಿಯ ಮುಖಂಡ ಶಿವರಾಜ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಎಚ್.ಡಿ. ಕೋಟೆ ತಾಲೂಕಿನಲ್ಲಿ 115 ಹಾಡಿಗಳಿದ್ದು, ಇದರಲ್ಲಿ 48 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಸುಮಾರು 32 ಸಾವಿರ ಮತದಾರರಿದ್ದಾರೆ. ತಾವೇ ಈ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಇವರೆಲ್ಲರ ಆಕಾಂಕ್ಷೆಯಾಗಿದ್ದು, ತಮಗೆ ಟಿಕೆಟ್ ನೀಡಿದಲ್ಲಿ ಖಂಡಿತವಾಗಿಯು ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.

ಅಲ್ಲದೆ, ಈ ಕುರಿತಂತೆ ಸಂಸದ ಧ್ರುವನಾರಾಯಣ್ ಅವರನ್ನು ಭೇಟಿ ಮಾಡಿದಾಗ ಉತ್ತಮ ಸ್ಪಂದನೆ ದೊರೆಯಿತೆಂದು ಹರ್ಷ ವ್ಯಕ್ತಪಡಿಸಿದರು.

ಈ ಹಿಂದೆ ಜೇನುಕುರುಬ ಸಮುದಾಯದ ದಿ. ಜೆ.ಕೆ. ಸುಬ್ಬಯ್ಯ ಅವರಿಗೆ ಅವಕಾಶ ನೀಡಿ ವಿಧಾನ ಮಂಡಲ ಪ್ರವೇಶಿಸಲು ಅವಕಾಶ ನೀಡಿದ್ದನ್ನು ಬಿಟ್ಟರೆ ಆದಿವಾಸಿ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಈ ಬಾರಿಯಾದರೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ತಮಗೆ ಟಿಕೆಟ್ ನೀಡುವ ಮೂಲಕ ಅದಿವಾಸಿಗಳಿಗೆ ಪ್ರಾತಿನಿದ್ಯ ನೀಡಬೇಕೆಂದು ಪಕ್ಷದ ವರಿಷ್ಟರಿಗೆ ಮನವಿ ಮಾಡಿದರು.

ಪುಟ್ಟಮಲ್ಲ, ಬಸವರಾಜು, ನಟರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: