ಕರ್ನಾಟಕಮನರಂಜನೆ

ರಾಜಕೀಯ ಪ್ರವೇಶ ಕುರಿತು ಹ್ಯಾಟ್ರಿಕ್ ಹೀರೋ ಸ್ಪಷ್ಟನೆ

ದಾವಣಗೆರೆ,ಮಾ.27: ನಾನು ಚುನಾವಣೆಯಲ್ಲಿ ಸ್ಪರ್ಧೆ ಮತ್ತು ರಾಜಕೀಯ ಪ್ರವೇಶ ಮಾಡುವುದಿಲ್ಲ. ನನ್ನ ಪತ್ನಿ ಗೀತಾ ಶಿವರಾಜ್‍ಕುಮಾರ್ ಮಾತ್ರ ರಾಜಕೀಯದಲ್ಲಿ ಮುಂದುವರಿಯುತ್ತಾರೆ ಎಂದು ಶಿವರಾಜ್‍ಕುಮಾರ್ ಸ್ಟಷ್ಟಣೆ ನೀಡಿದ್ದಾರೆ.

ಟಗರು ಸಿನಿಮಾ ವಿಜಯೋತ್ಸವದ ಹಿನ್ನೆಲೆಯಲ್ಲಿ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಿಂದ ಅಶೋಕ ಚಿತ್ರಮಂದಿರದ ವರೆಗೂ ಮೆರವಣಿಗೆ ಮೂಕ ಬಂದ ಅವರು, ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ನಾನು ಸ್ವಾಗತ ಮಾಡುತ್ತೇನೆ. ಉಪೇಂದ್ರ ಯಾವಾಗಲೂ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದರ ಬಗ್ಗೆ ಚಿಂತಿಸುತ್ತಿರುತ್ತಾರೆ. ನಾನು ಯಾವಾಗಲೂ ಉಪೇಂದ್ರ ಅವರಿಗೆ ಬೆಂಬಲ ನೀಡುತ್ತೇನೆ. ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಮತ್ತು ರಾಜಕೀಯ ಪ್ರವೇಶ ಮಾಡುವುದಿಲ್ಲ. ನನ್ನ ಪತ್ನಿ ಗೀತಾ ರಾಜಕೀಯದಲ್ಲಿ ಮುಂದುವಯಲು ನಾನು ಸಹಕರಿಸುತ್ತೇನೆಂದು ಹೇಳಿದರು.

ಶಿವರಾಜ್‍ಕುಮಾರ್ ರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಚಿತ್ರಮಂದಿರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನೂಕು ನುಗ್ಗಲು ಸಹ ಉಂಟಾಯಿತು. (ವರದಿ: ಪಿ.ಎಸ್ )

Leave a Reply

comments

Related Articles

error: