ಮೈಸೂರು

ಹಸಿರುಮನೆ ಅನಿಲ ಬಳಕೆ ಕಡಿಮೆ ಮಾಡಿ : ಪ್ರೊ.ರೋಡಿಗರ್

ಜಾಗತಿಕ ತಾಪಮಾನವನ್ನು ತಡೆಗಟ್ಟಲು ಹಸಿರುಮನೆ ಅನಿಲ ಬಳಕೆಯನ್ನು ಕಡಿಮೆ ಬಳಸುವಂತೆ ಜಗತ್ತಿನಾದ್ಯಂತ ಒತ್ತಡ ಹೇರಲಾಗುತ್ತಿದೆ ಎಂದು ಜರ್ಮನಿಯ ಡುಯೆಸ್ ಬರ್ಗ್ ಎಸೆನ್ ವಿವಿಯ ಪ್ರೊ.ರೋಡಿಗರ್ ಕೈಸೆಲ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಗೈನ್ ಕೋರ್ಸ್ ನ್ನು ಪ್ರೊ.ರೋಡಿಗರ್ ಕೈಸೆಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು 195 ದೇಶಗಳು ಪ್ಯಾರೀಸ್ ಹವಾಮಾನ ಸಮ್ಮೇಳನದಲ್ಲಿ 2015ರಲ್ಲೇ ಸಹಿ ಹಾಕಿವೆ. ಅದರ ಪ್ರಕಾರ 2 ಡಿಗ್ರಿ ಸೆಂಟಿಗ್ರೇಡ್  ತಾಪಮಾನ ಕಡಿಮೆ ಮಾಡಲು ಕೆಲವು ನಿಯಮಗಳನ್ನು ಅಳವಡಿಸಿಕೊಂಡಿವೆ, 2050ರ ವೇಳೆ ಅವಶ್ಯವಿರುವ ಆರ್ಥಿಕತೆಯನ್ನು ಸಾಧಿಸಲು ಯುರೋಪ್ ದೇಶಗಳ ಜೊತೆ ಇತರ ದೇಶಗಳೂ ಪ್ರಯುತ್ನಿಸುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ 700ಕ್ಕೂ ಅಧಿಕವಿರುವ ಗ್ಯಾನ್ ಕೋರ್ಸ್ ಗಳಲ್ಲಿ ಮುಖ್ಯವಾದ ಮೂರು ಕೋರ್ಸ್ ಗಳನ್ನು ಮೈಸೂರು ವಿಶ್ವವಿದ್ಯಾನಿಲಯ ಅಳವಡಿಸಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ಯಾನ್ ಸ್ಥಳೀಯ ಸಂಯೋಜಕ ಪ್ರೊ.ಪಿ. ನಾಗಭೂಷಣ್, ಪ್ರೊ. ಇಂದಿರಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: