ಮೈಸೂರು

ಈಜಲು ತೆರಳಿದ ವ್ಯಕ್ತಿ ಸಾವು

ಈಜಲು ತೆರಳಿದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಪತ್ನಿಯ ಎದುರಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಹೆಚ್.ಡಿ.ಕೋಟೆ ತಾಲೂಕಿನ ರೆಡ್ ಅರ್ಥ್ ರೆಸಾರ್ಟ್ ನಲ್ಲಿ ನಡೆದಿದೆ.

ಮೃತನನ್ನು ಕೇರಳದ ಕಣ್ಣೂರು ನಿವಾಸಿ ರಾಮ್ ಗೋಪಾಲ್ (30)ಎಂದು ಗುರುತಿಸಲಾಗಿದೆ. ನೀರಿನಲ್ಲಿ ಯೋಗಾಸನ ಮಾಡುವ ಹವ್ಯಾಸವನ್ನು ಹೊಂದಿದ್ದ ರಾಮ್ ಪತ್ನಿ ಎದುರಿನಲ್ಲೇ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಮತ್ತೆ ಮೇಲೆ ಏಳಲೇ ಇಲ್ಲ.

ಘಟನೆ ಕುರಿತಂತೆ ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: