ಮೈಸೂರು

ಮಹಿಳೆ ಶಿಕ್ಷಣ ಪಡೆದರೆ ಮಾತ್ರ ಶೋಷಣೆಯಿಂದ ಹೊರಬರಲು ಸಾಧ್ಯ : ಡಾ.ಹೇಮಾ ಪಟ್ಟಣಶೆಟ್ಟಿ

science-web21ನೇ ಶತಮಾನಕ್ಕೆ ಕಾಲಿಟ್ಟರೂ ಮಹಿಳೆಯರ ಶೋಷಣೆ ತಪ್ಪಿಲ್ಲ. ಮಹಿಳೆ ಶಿಕ್ಷಣ ಪಡೆದರೆ ಮಾತ್ರ ಶೋಷಣೆಗಳಿಂದ ಹೊರಬರಲು ಸಾಧ್ಯ ಎಂದು ಖ್ಯಾತ ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ತಿಳಿಸಿದರು.

ಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಮತ್ತು ಮೈಸೂರುಜಿಲ್ಲಾ ಸಮಿತಿ, ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ  ಆರ್.ಎಮ್.ಎನ್.ಎಚ್  ಸಭಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಮಹಿಳಾ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಣ್ಣು ಮಕ್ಕಳು ಮನೆಗೆ ಮಾತ್ರ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು. ಗೃಹಿಣಿ ಅಂತ ಹೇಳಿಕೊಂಡು ನಿಮ್ಮನ್ನು ನೀವು ಮನೆಗೆ ಸೀಮಿತಗೊಳಿಸಿಕೊಳ್ಳಬೇಡಿ. ಮಹಿಳೆಯರು ಮಾಧ್ಯಮಗಳಲ್ಲಿ ಬರುವ ಜ್ಯೋತಿಷ್ಯ, ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವ ಸೀರಿಯಲ್ ಗಳನ್ನು ನೋಡುವುದು ಹೆಚ್ಚಾಗಿದೆ. ಇದರಿಂದ ಮೌಡ್ಯತೆಗಳು ಹೆಚ್ಚುತ್ತಿವೆ. ಮಹಿಳೆಯರು ಕೆಟ್ಟ ಸಂಪ್ರದಾಯಗಳಿಗೆ ಕಟ್ಟು ಬೀಳುತ್ತಿದ್ದಾರೆ ಹೀಗಾಗಬಾರದು. ಸ್ವಾಸ್ಥ್ಯ ಕುಟುಂಬ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು, ಆದ್ದರಿಂದ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಹೊಸ ಚಿಂತನೆಗಳಲ್ಲಿ ತೊಡಗಿ ಮನೆ ಮತ್ತು ಸಾಮಾಜದ ಏಳ್ಗೆಗಾಗಿ ದುಡಿಯಿರಿ ಎಂದರು.

ನಮ್ಮರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು.ಧೈರ್ಯದಿಂದ ಮುನ್ನಡೆಯಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು, ದೌರ್ಜನ್ಯಗಳನ್ನು ಎದುರಿಸಲು ನಾವು ಸಿದ್ದರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಪಿ,ವೆಂಕಟರಾಮಯ್ಯ ಮಾತನಾಡಿ ಮಹಿಳೆಯರನ್ನು ಜಾಗೃತಿಗೊಳಿಸಲು ಇಂತಹ ಸಮಾವೇಶಗಳು ಬಹಳ ಮುಖ್ಯ. ಮಹಿಳೆಯರು ಮನೆಯಿಂದ ಹೊರಬಂದು ಇಂತಹ ಸಮಾವೇಶಗಳಲ್ಲಿ ಭಾಗವಹಿಸಬೇಕು ಎಂದರು.

ವೇದಿಕೆಯಲ್ಲಿ ವಸುಂಧರಾ ಭೂಪತಿ, ಡಾ.ಬಿ.ಎಂ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: