ಕರ್ನಾಟಕ

ಕಾರ್ಯಾಚರಣೆಯಿಂದ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ : ನಾಲಕ್ಕರಲ್ಲಿ ಮೂರು ಕಾಡಾನೆಗೆ ಅಳವಡಿಕೆ

ರಾಜ್ಯ(ಮಡಿಕೇರಿ)ಮಾ.27:-   ಬೆಳಿಗ್ಗಿನಿಂದಲೇ ಅರಣ್ಯ ಸಿಬ್ಬಂದಿಗಳ ತಂಡ ನುರಿತ ಆನೆಗಳು ಮಡಿಕೇರಿ ಸಮೀಪದ ಈರಳೆವಳಮುಡಿ ಗ್ರಾಮದ ಮೋದೂರ್ ತೋಟದಲ್ಲಿ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಆನೆಯ ಇರುವರಿಕೆಯ ಜಾಗವನ್ನು ಹುಡುಕಾಡಿ ಕಾಡಾನೆಯೊಂದಕ್ಕೆ ರೆಡಿಯೋ ಕಾಲರ್ ಅಳವಡಿಸುವಲ್ಲಿ ಯಶಸ್ವಿಯಾದರು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹಾಗೂ ಸೋಮವಾರಪೇಟೆ ಉಪವಲಯದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ.ಎಸ್.ಚಿಣ್ಣಪ್ಪ ಹಾಗೂ  ಹುಣುಸೂರು ವನ್ಯಜೀವಿ ವಿಭಾಗದ ನುರಿತ ನುರಿತ ವೈದ್ಯಾಧಿಕಾರಿ ಡಾ. ಮುಜೀಬ್ ರವರ ಮಾರ್ಗದರ್ಶನದಂತೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಚರಣೆ ನಡೆಸಲಾಯಿತು. ಮಡಿಕೇರಿ ವಿಭಾಗದ ಕುಶಾಲನಗರ ವಲಯಕ್ಕೆ ಸಂಬಂಧಿಸಿದ ಈರಳೆ ವರಳಮುಡಿ ಗ್ರಾಮದಲ್ಲಿ ಸುಮಾರು16ರಿಂದ 18 ಕಾಡಾನೆಗಳ ಗುಂಪು ಸುತ್ತಲಿನ ಕಾಫಿ ತೋಟಗಳಲ್ಲೇ ಬೀಡು ಬಿಡುತ್ತಿದ್ದವು. ಹಲವು ಬಾರಿ ಅರಣ್ಯ ಸಿಬ್ಬಂದಿಗಳು ಆನೆಕಾರ್ಯಚರಣೆಗಳ ಮೂಲಕ ಕಾಡಿಗೆ ಅಟ್ಟುತ್ತಿದ್ದರು. ಆನೆಗಳ ಚಲನವಲನದ ಮಾಹಿತಿಯನ್ನು ತಿಳಿಯಲು ಗುಂಪಿನಲ್ಲಿರುವ ಹೆಣ್ಣನೆಯನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲು ಸಿದ್ದ ಗೊಳಿಸಲಾಯಿತು. ಮತ್ತಿಗೋಡು ಕ್ಯಾಂಪಿನಿಂದ ನುರಿತ ಆನೆಗಳಾದ ಭೀಮ ಹಾಗೂ ಅಭಿಮನ್ಯುವನ್ನು ಕರೆತಂದು ಕುಶಾಲನಗರ ಅರಣ್ಯ ವಲಯಾಧಿಕಾರಿಗಳ ಅರುಣ್, ಉಪಅರಣ್ಯ ವಲಯಾಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್ನ್, ಬಾನಂಡ ದೇವಿಪ್ರಸಾಸ್,ಸುಬ್ಬಮಣಿ,ಮಂಜುನಾಥ್ ಗೂಳಿ ತಮ್ಮ ತಂಡ ದೊಂದಿಗೆ ಕಾರ್ಯನಿರತರಾದರು.  ಮಧ್ಯಾಹ್ನ 2ಗಂಟೆಗೆ  ಕಾಡಾನೆಗಳ ಗುಂಪಿನೆಡೆಗೆ ಅರಣ್ಯ ಅಧಿಕಾರಿಗಳ ತಂಡ ಹಾಗೂ  ಸಾಕಾನೆಗಳು ದಾವಿಸುತಿದ್ದಂತೆ ಗಾಬರಿಗೊಂಡ ಕಾಡಾನೆ ಮೋದೂರು ತೋಟದಿಂದ ಓಡಲಾರಂಬಿಸಿತು. ಆನೆಯ ಮೇಲಿಂದ ಸಿಬ್ಬಂದಿ ಅರವಳಿಕೆ ಮದ್ದಿನ ಗುಂಡನ್ನು ಹಾರಿಸಿದರು. ಒಟ್ಟಿಗಿದ್ದ ಕಾಡಾನೆಗಳು ಓಡತೊಡಗಿದರೆ ಅರವಳಿಕೆ ಮದ್ದಿನ ಗುಂಡುತಾಗಿದ ಸುಮಾರು 25ರಿಂದ30 ವರ್ಷದ ಸಣ್ಣಗಿನ ಹೆಣ್ಣಾನೆ ಬದಲೆರ ಕೌಶಿಕ್ ರವರ ತೋಟದಲ್ಲಿ ನಿಂತಿತ್ತು. ಸಾಕಾನೆಗಳಾದ ಭೀಮ ಹಾಗು ಅಭಿಮನ್ಯುವಿನ ಸಹಾಯದಿಂದ ಹಿಡಿದು ಅರಣ್ಯ ಸಿಬ್ಬಂದಿಗಳು ಗಂಟಲಿಗೆ ರೇಡಿಯೋಕಾಲರ್ ಅಳವಡಿಸಿ ಡಾ. ಮುಜೀಬ್ ಆಂಟಿಡೋಟ್ ನೀಡಿ ಕಾಡಾನೆಯನ್ನು ಬಿಡಲಾಯಿತು. ಗಾಬರಿಗೊಂಡ ಕಾಡಾನೆ ಸುತ್ತಲಿನವರ ಮೇಲೆ ಬರುತಿದ್ದಂತೆ ಸುತ್ತಲಿದ್ದ ಸಿಬ್ಬಂದಿಗಳು ಓಡತೊಡಗಿದರು. ಕಳೆದ ವಾರದ ಹಿಂದೆ ವಿರಾಜಪೇಟೆ ವಲಯದಲ್ಲಿ ಕಾರ್ಯಚರಣೆ ಮೂಲಕ ಎರಡು ಕಾಡಾನೆಗಳಿಗೆ ರೇಡಿಯೋಕಾಲರ್ ಅಳವಿಡಿಸಿದ್ದು ಇದು ಮೂರನೆಯದಾಗಿದೆ. ನಾಳೆ ಕುಶಾಲನಗರ ವಲಯದ ಮತ್ತೊಂದು ತಂಡದ ಕಾಡಾನೆಯೊಂದಕ್ಕೆ ರೆಡಿಯೋಕಾಲರ್ ಅಳವಡಿಸಲು ಅರಣ್ಯ ಸಿಬ್ಬಂದಿಗಳು ಸಿದ್ದತೆ ನಡೆಸುತ್ತಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: