Uncategorized

ನೀತಿ ಸಂಹಿತೆ ಜಾರಿ : ಪ್ರಚಾರ ಫಲಕ ತೆರವು

ರಾಜ್ಯ(ಮಡಿಕೇರಿ)ಮಾ.27:- ವಿಧಾನ ಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪಟ್ಟಣದಲ್ಲಿ ಅಳವಡಿಸಿದ್ದ ರಾಜ್ಯ ಸರಕಾರದ ವಿವಿಧ ಯೋಜನೆಗಳ ಪ್ರಚಾರ ಫಲಕವನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ತೆರವುಗೊಳಿಸಿದರು.

ಸೋಮವಾರಪೇಟೆ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಸೇರಿದಂತೆ ಇತರೆಡೆ ಅಳವಡಿಸಿದ್ದ, ಸರಕಾರದ ವಿವಿಧ ಸಾಧನೆಗಳನ್ನು ಬಿಂಬಿಸುವ ಪ್ರಚಾರ ಫಲಕವನ್ನು ಪ.ಪಂ.ಮುಖ್ಯಾಧಿಕಾರಿ ನಾಚಪ್ಪ ,ಆರೋಗ್ಯ ನಿರೀಕ್ಷಕ ಉದಯಕುಮಾರ್ ಸೇರಿದಂತೆ ಸಿಬ್ಬಂದಿಗಳು ತೆರವು ಮಾಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: