ಮೈಸೂರು

ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆ

ಕರ್ತವ್ಯ ನಿರತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಲಾರಿ ಚಾಲಕನೋರ್ವ ಹಲ್ಲೆ ನಡೆಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಬಸ್ ಚಾಲಕನನ್ನು ನಟರಾಜ್ ಎಂದು ಗುರುತಿಸಲಾಗಿದೆ. ಅವರು ಮೈಸೂರಿನಿಂದ ಬಿಳಿಕೆರೆಗೆ ಹೋಗುವಾಗ ಬೆಳವಾಡಿ ಬಸ್ ನಿಲ್ದಾಣದ ಸಮೀಪ ಲಾರಿ ಚಾಲಕನೋರ್ವ ಯು ಟರ್ನ್ ಮಾಡುವ ವೇಳೆ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಬಸ್ಸಿನ ಎರಡು ಕಂಬಿಗಳು, ಎರಡು ಕಿಟಕಿ ಗಾಜುಗಳು ಒಡೆದಿವೆ ಎನ್ನಲಾಗಿದೆ.

ಇದರಿಂದ ಬಸ್ ಮತ್ತು ಲಾರಿ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಲಾರಿ ಚಾಲಕ ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಪ್ರಕರಣ ಕುರಿತಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Leave a Reply

comments

Related Articles

error: