ಮೈಸೂರು

ವಿವಿಧ ಕ್ಷೇತ್ರದ ಸಾಧಕರಿಗೆ ‘ಸೃಜನ ಸದ್ಭಾವನಾ’ ಪ್ರಶಸ್ತಿ : ಸನ್ಮಾನ

ಮೈಸೂರು.ಮಾ.28 : ನಗರದ ಸೃಜನ ಲೇಖಕರು ಮತ್ತು ಕಲಾವಿದರ ಬಳಗದಿಂದ ವಿವಿಧ ಕ್ಷೇತ್ರದ ಸಾಧಕರಿಗೆ ‘ಸೃಜನ ಸದ್ಭಾವನಾ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಂಸ್ಥೆಯು ಕಳೆದ 15 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮೂಲಕ ಸಾಧನೆಗೈಯುವವರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸನ್ಮಾನಿಸುತ್ತಿದ್ದು, 2017-18ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಬುಧವಾರ ಪತ್ರಕರ್ತರ ಭವನದಲ್ಲಿ ಸರಳವಾಗಿ ನಡೆಯಿತು.

ಪ್ರಸಕ್ತ ಸಾಲಿನ ಸದ್ಭಾವನಾ ಪ್ರಶಸ್ತಿಯನ್ನು  ಎಲ್.ಜಿ.ದಕ್ಷಿಣಾಮೂರ್ತಿ, ಡಿ.ಎನ್.ಬಾಬು (ಮಾಧ್ಯಮ), ಡಾ.ಡಿ.ಮಾಧವ್, ಡಾ.ಅಖಿಲಾ, ಶುಶ್ರೂಷಕ ಜಿ.ಬಿ.ವಸಂತಕುಮಾರ್ (ಆರೋಗ್ಯ) ಎಸ್.ಎಸ್.ಮನೋಜ್ (ಶಿಕ್ಷಣ ಕ್ಷೇತ್ರ) ಹಾಗೂ ಪ್ರಗತಿಪರ ರೈತ ಕೆ.ಟಿ.ನಟರಾಜ್ ಇವರುಗಳಿಗೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಉಪಾಧ್ಯಕ್ಷ ಎಂ.ಸುಬ್ರಮಣ್ಯ, ನಿರ್ದೇಶಕ ಜಯಶಂಕರ್ ಬದನಗುಪ್ಪೆ, ಹಿರಿಯ ಛಾಯಾಗ್ರಾಹಕ ಪ್ರಗತಿಗೋಪಾಲಕೃಷ್ಣ ಹಾಗೂ ಸಂಸ್ಥೆ ಅಧ್ಯಕ್ಷ ರಾ.ಸುರೇಶ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: