ಮೈಸೂರು

ಹಿಂಬಾಗಿಲಿನ ಮೂಲಕ ನುಸುಳಿ 1.40ಲಕ್ಷರೂ.ಮೌಲ್ಯದ ಚಿನ್ನಾಭರಣ ಕಳ್ಳತನ

ಮೈಸೂರಿನ ಕನಕದಾಸ ನಗರದ ಮನೆಯೊಂದರ ಹಿಂಬಾಗಿಲನ್ನು ನೂಕಿ ಮನೆಯೊಳಗೆ ನುಗ್ಗಿದ ಕಳ್ಳರು 1.40ಲಕ್ಷರೂ.ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕನಕದಾಸನಗರ ನಿವಾಸಿ ಆದಿರಾಜ ಅರಸ್ ಎಂಬವರ ಮನೆಯಲ್ಲಿಯೇ ಈ ಕಳ್ಳತನ ಕೃತ್ಯ ನವರೆಂಬರ್ 27ರಂದು ನಡೆದಿದೆ. ನವೆಂಬರ್ 27ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಮಳವಳ್ಳಿಗೆ ತೆರಳಿದ ಆದಿರಾಜ ಮನೆಯವರೆಲ್ಲ ಸಾಯಂಕಾಲ ಮನೆಗೆ ಮರಳಿದ್ದಾರೆ. ಮನೆಯೊಳಗೆ ಬಂದು ನೋಡಲಾಗಿ ಮನೆಯಲ್ಲಿರುವ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಸ್ನಾನಗೃಹದ ಬಳಿ ಇರುವ ಬಾಗಿಲನ್ನು ಆಯುಧದಿಂದ ಹೊಡೆದು ಮುರಿದು ಹಾಕಿ ಮನೆಯೊಳಗೆ ಪ್ರವೇಶಿಸಿರುವ ಕಳ್ಳರು ಬೀರುವಿನಲ್ಲಿರಿಸಲಾದ ಸುಮಾರು 49ಗ್ರಾಂ ತೂಕದ ಚಿನ್ನದ ಒಡವೆಗಳು, 205ಗ್ರಾಂ ಬೆಳ್ಳಿಯ ಸಾಮಾಗ್ರಿಗಳು ಹಾಗೂ ಮೂರು ಸಾವಿರ ರೂ.ನಗದನ್ನು ಕದ್ದೊಯ್ದಿದ್ದಾರೆ.

ಪ್ರಕರಣ ಕುರಿತಂತೆ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

comments

Related Articles

error: