ಮೈಸೂರು

ಅನುಮಾನಗಳ ಗೂಡಾದ ಪ್ರಾಣಿಗಳ ಸರಣಿ ಸಾವು ..!

ಸುಪ್ರಸಿದ್ಧ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸರಣಿ ಸಾವು ಮುಂದುವರೆದಿದ್ದು ಇದು ಹಲವಾರು ಅನುಮಾನಗಳಿಗೆ ಎಡೆಮಾಡುತ್ತಿದೆ.

ಕಳೆದೊಂದು ತಿಂಗಳಲ್ಲಿ ಕಾಳಿಂಗ ಸರ್ಪ, ಕಾಡೆಮ್ಮ ,ಲ್ಯಾಂಟಾ ಮಂಗ ಹಾಗೂ ಗರ್ಭಿಣಿ ಜೀಬ್ರಾ ಸಾವನ್ನಪ್ಪಿದ್ದು ಪ್ರಾಣಿಗಳ ಸರಣಿ ಸಾವನ್ನು ಗುಪ್ತವಾಗಿರಿಸಿರುವ ಮೃಗಾಲಯದ ನಡೆ ಸಾರ್ವಜನಿಕರಲ್ಲಿ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಗಂಡ-ಹೆಂಡಿರ ಜಗಳದಿಂದ ಕೂಸು ಬಡವಾಯ್ತು ಎನ್ನುವಂತೆ ಮೃಗಾಲಯ ಅಧಿಕಾರಿಗಳ ಮತ್ತು ನೌಕರರ ನಡುವೆ ಹೊಂದಾಣಿಕೆ ಕೊರತೆ ಹಾಗೂ ಮುಸುಕಿನ ಗುದ್ದಾಟದಿಂದ ಅಮಾಯಕ ಪ್ರಾಣಿಗಳು ಬಲಿಯಾಗಿವೆ ಎನ್ನುವ ಅನುಮಾನವು ಕಾಡತೊಡಗಿದೆ.

zooಕಳೆದ ವರ್ಷವಷ್ಟೇ ಸಂತಾನಭಿವೃದ್ಧಿಯ ಹಿನ್ನೆಲೆಯಲ್ಲಿ ಇಸ್ರೇಲ್‍ನ ರಾಮತ್ ಗನ್ ಸಫಾರಿ ಪಾರ್ಕ್‍ ಜೀಬ್ರಾಗಳಲ್ಲಿ ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿಯೇ  ಕಿಡ್ನಿ ವೈಫಲ್ಯ ಹಾಗೂ ಸಾಂಕ್ರಾಮಿಕ ಸೋಂಕಿನಿಂದ ಎರಡು ಸಾವನಪ್ಪಿದ್ದವು. ನಂತರ ಉಳಿದಿದ್ದು ಎರಡು ಹೆಣ್ಣು ಹಾಗೂ ಒಂದು ಗಂಡು ಮಾತ್ರ. ಈಗಾಗಲೇ ಗಂಡು ಜೀಬ್ರಾ ಸಾವನ್ನಪ್ಪಿದೆ. ಹೆಣ್ಣು ಮೊದಲೊಂದು ಬಾರಿ ಗರ್ಭಿಣಿಯಾಗಿದ್ದು ಕಾರಣಾಂತರಗಳಿಂದ ಮರಿಯು ಸತ್ತಿತ್ತು. ಈಗ ಮತ್ತೆ ಗರ್ಭಿಣಿಯಾಗಿದ್ದ ಬೀಬ್ರಾವು ಸಾವನ್ನಪ್ಪಿದೆ ಎನ್ನಲಾಗಿದೆ. ಕಳೆದ ಬಾರಿ ಮೃತಪಟ್ಟ ಕೆಲವು ಪ್ರಾಣಿಗಳಿಗೆ ವಿಷ ಪ್ರಾಶನ ಹಾಗೂ ಕೆಲವು ಸಹಜವಾಗಿಯೇ ಮೃತಪಟ್ಟಿರುವ ಬಗ್ಗೆ ಗುಮಾನಿಗಳು ಮೂಡಿವೆ. ಇದೀಗ ಪ್ರಾಣಿಗಳ ಸರಣಿ ಸಾವು ಆರಂಭವಾಗಿದ್ದು ಈ ಬಗ್ಗೆ ಮೃಗಾಲಯದಿಂದ ಯಾವುದೇ ದೃಢೀಕೃತ ಮಾಹಿತಿ ಇಲ್ಲ.

Leave a Reply

comments

Related Articles

error: