ಸುದ್ದಿ ಸಂಕ್ಷಿಪ್ತ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಸೇತುಬಂಧ ಮಾರ್ಗದರ್ಶನ

ಮೈಸೂರು,ಮಾ.28 : ನವೋದಯ ಫೌಂಡೇಷನ್ ನಿಂದ ಹತ್ತನೇ ತರಗತಿ ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳಿಗೆ ಆರು ದಿನದ ಉಚಿತ ಸೇತುಬಂಧ ಮಾರ್ಗದರ್ಶನ ಶಿಬಿರವನ್ನು ವಿಜಯಚೇತನ ವಿಜ್ಞಾನ ಮತ್ತು ವಾಣಿಜ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಏ.10 ರಿಂದ 16ರವರೆಗೆ ಆಯೋಜಿಸಿದೆ.

ಎಸ್.ಎಸ್.ಎಲ್.ಸಿ ನಂತರ ಪಿಯುಸಿ ದಾಖಲಾಗಲಿರುವ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಇದರೊಂದಿಗೆ 6 ದಿನದಲ್ಲಿ ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಸ್ಪರ್ಧಾತ್ಮಕ ಪರೀಕ್ಷಷೆಯನ್ನು ನಡೆಯುವುದು. ಉತ್ತೀರ್ಣರಾದವರಿಗೆ 25, 15, ಹಾಗೂ 10 ಸಾವಿರ ರೂಗಳ ನಗದು ಬಹುಮಾನವಿದೆ. ಆಸಕ್ತರು ಏ.9ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ದೂ.ಸಂ. 0821 4044624, 9611012411, 7849015566 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: