
ಪ್ರಮುಖ ಸುದ್ದಿ
ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ ಮತ್ತೋರ್ವ ಯುವನಾಯಕ ರೇವಣ್ಣ
ರಾಜ್ಯ(ಮಂಡ್ಯ)ಮಾ.29:- ಈಗಾಗಲೇ ಚುನಾವಣಾ ರಣ ಕಹಳೆ ಮೊಳಗಿಸಲಾಗಿದ್ದು ಮಂಡ್ಯ ಜಿಲ್ಲೆಯಲ್ಲಿಯೂ ಚುನಾವಣಾ ಕಣ ರಂಗೇರಿದೆ. ದಿವಂಗತ ಪುಟ್ಟಣ್ಣಯ್ಯ ಪುತ್ರ ದರ್ಶನ್ ಚುನಾವಣಾ ಅಭ್ಯರ್ಥಿ ಎಂದು ಈಗಾಗಲೇ ಹೇಳಲಾಗಿದ್ದು, ಅಲ್ಲಿಯೇ ಮತ್ತೋರ್ವ ಯುವನಾಯಕ ಅಖಾಡಕ್ಕಿಳಿದಿದ್ದಾರೆ.
ದಿ.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅನುಕಂಪದ ಆಧಾರದ ಮೇಲೆ ಅಧಿಕಾರ ಹಿಡಿಯಲು ಮುಂದಾಗಿದ್ದು, ಮತ್ತೋರ್ವ ಯುವನಾಯಕ ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ. ಪುಟ್ಟಣ್ಣಯ್ಯ ಪುತ್ರ ವಿರುದ್ಧ ಪಾಂಡವಪುರದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಪಾಂಡವಪುರದಲ್ಲಿ ತಮ್ಮ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದರಂತೆ. ರೇವಣ್ಣ ಜನ್ಮದಿನ ಆಚರಣೆಗೆ ದರ್ಶನ್ ಪುಟ್ಟಣ್ಣಯ್ಯ ಆಗಮಿಸಿ ಶುಭಾಶಯ ಕೋರಿ ಹೋಗಿದ್ದಾರಂತೆ. ಇದೀಗ ಅಲ್ಲಿ ದರ್ಶನ್ ಪುಟ್ಟಣ್ಣಯ್ಯ,ರೇವಣ್ಣ, ಸಂಸದ ಪುಟ್ಟರಾಜು ಅವರ ಸ್ಪರ್ಧೆಯಿಂದ ತ್ರಿಕೋನ್ ಸ್ಪರ್ಧೆಯೇರ್ಪಡಲಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)