ಮೈಸೂರು

ಅತಿಕ್ರಮಣಕ್ಕೆ ಒಳಗಾಗಿದ್ದ ಫುಟ್‍ಪಾತ್‍ ತೆರವು

ಶ್ರೀರಾಂಪುರ 2ನೇ ಹಂತದಲ್ಲಿ ಫುಟ್‍ಪಾತ್‍ ಜಾಗವನ್ನು ಅತಿಕ್ರಮಣ ಮಾಡಿಕೊಂಡು ನಿವಾಸಿಗಳು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಲಾಗಿದ್ದ ಸ್ಥಳಗಳನ್ನು ಪೊಲೀಸ್‍ ಭದ್ರತೆಯಲ್ಲಿ ಕಾರ್ಪೋರೇಷನ್‍ ಸಿಬ್ಬಂದಿ ತೆರವುಗೊಳಿಸಿದರು.

ಮಂಗಳವಾರದಂದು ಪೊಲೀಸರೊಂದಿಗೆ ಆಗಮಿಸಿದ ಕಾರ್ಪೊರೇಟರ್ ಕೆಂಪಣ್ಣ ಅವರು ಅತಿಕ್ರಮಣ ಮಾಡಿಕೊಂಡಿರುವ ಫುಟ್‍ಪಾತ್‍ ಸ್ಥಳಗಳನ್ನು ತೆರವುಗೊಳಿಸಲು ಆದೇಶಿಸಿದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಜೆ.ಜಗದೀಶ್ ಅವರು ಆಕ್ರಮಿಸಿಕೊಳ್ಳಲಾಗದ ಸಾರ್ವಜನಿಕರ ಉಪಯೋಗಕ್ಕೆ ಇರುವ ಸ್ಥಳಗಳು ಅವರ ಉಪಯೋಗಕ್ಕೆ ಮಾತ್ರ ಇರಬೇಕು. ಅಂತಹ ಜಾಗಗಳನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿಕೊಂಡಲ್ಲಿ ತೆರವುಗೊಳಿಸಿ ಎಂದು ಸೂಚನೆ ನೀಡಿದ್ದು, ಈ ಮೇರೆಗೆ ಕಾರ್ಪೋರೇಷನ್ ನಗರ ಮತ್ತು ನಗರದ ಹೊರವಲಯಗಳಲ್ಲೂ ಕಾರ್ಯಾಚರಣೆ ನಡೆಸಿ ಆಕ್ರಮಿಸಿಕೊಳ್ಳಲಾದ ಸ್ಥಳಗಳ ತೆರವುಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತಿದೆ.

ಮಂಗಳವಾರಂದು ಬೆಳಗ್ಗೆ ಶ್ರೀರಾಂಪುರ 2ನೇ ಹಂತದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಈ ಕಾರ್ಯಕ್ಕೆ 1 ಜೆಸಿಬಿ, 2 ಲಾರಿ ಮತ್ತು 4 ಗ್ಯಾಂಗ್‍ಮನ್‍ಗಳನ್ನು ಬಳಸಲಾಗಿತ್ತು.

Leave a Reply

comments

Related Articles

error: