
ಮೈಸೂರು,ಮಾ.29 : ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಡಾಟಾ ಅನಾಲಿಟಿಕ್ಸ್ ಅಂಡ್ ಲರ್ನಿಂಗ್ (ಡಾಲ್’18) ವಿಷಯವಾಗಿ ಎರಡು ದಿನಗಳ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಗುರು ತಿಳಿಸಿದರು.
ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನವು ಮಾ.30,31ರಂದು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆಯಲಿದ್ದು,. ದಿ.30ರ ಬೆಳಗ್ಗೆ 10ಕ್ಕೆ ಖ್ಯಾತ ಸಂಶೋಧಕ ಪದ್ಮಶ್ರೀ ಪ್ರೊ.ಶಂಕರ್ ಕೆ.ಪಾಲ್ ಉದ್ಘಾಟಿಸುವರು. ಕುಲಪತಿ ಪ್ರೊ.ಸಿ.ಬಸವರಾಜು ಅಧ್ಯಕ್ಷತೆ. ಅಲಹಬಾದಿನ ಐಐಟಿಟಿ ನಿರ್ದೇಶಕ ಪ್ರೊ.ಪಿ.ನಾಗಭೂಷಣ್, ಡಿಜಿಟಲ್ ಪ್ರೊಸಿಡಿಂಗ್ಸ್ ಬಿಡುಗಡೆಗೊಳಿಸುವರು. ಪ್ರೊ.ಜಿ.ಹೇಮಂತ್ ಕುಮಾರ್ ಇರುವರು ಎಂದು ತಿಳಿಸಿದರು.
ಮಾ.31ರಂದು ಸಂಜೆ4.30ಕ್ಕೆ ಬೆಂಗಳೂರಿನ ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವಿಸ್ ಲಿಮಿಟೆಡ್ ಮುಖ್ಯಸ್ಥ ವಾಸುದೇವ ರಾವ್ ಅವರಿಂದ ಸಮಾರೋಪ ಭಾಷಣ ಮಾಡುವರು, ಮುಖ್ಯ ಅತಿಥಿಯಾಗಿ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ. ಕುಲಸಚಿವೆ ಡಿ.ಭಾರತಿ ಅಧ್ಯಕ್ಷತೆ ವಹಿಸುವರು ಎಂದರು.
ಕಂಪ್ಯೂಟರ್ ದತ್ತಾಂಶಕ್ಕೆ ಸಂಬಂಧಿಸಿದಂತೆ ವಿದೇಶದಿಂದಲೇ ತಜ್ಞರು ಅನ್ ಲೈನ್ ಮೂಲಕ ಉಪನ್ಯಾಸ ನೀಡುವರು, ಇವರೊಂದಿಗೆ ಸುಮಾರು 38ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಲಿದ್ದು, ಈ ಪ್ರಬಂಧಗಳನ್ನೊಳಗೊಂಡ 250 ಪುಟಗಳ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು. ಸಮ್ಮೇಳನದಲ್ಲಿ ಪ್ರಾನ್ಸ್, ಚೈನಾ, ಅಫ್ಘಾನಿಸ್ತಾನ, ಇರಾನ್, ಯುಎಸ್ ಎ, ಆಫ್ರಿಕಾ ಸೇರಿದಂತೆ 400ಕ್ಕೂ ಹೆಚ್ಚು ಜನರು ಸಂಶೋಧಕರು ಭಾಗಿಯಾಗುವರು ಎಂದರು.
ಗೋಷ್ಠಿಯಲ್ಲಿ ಸಮ್ಮೇಳನದ ಕಾರ್ಯದರ್ಶಿ ಡಾ.ನಾಗೇಂದ್ರ ಸ್ವಾಮಿ, ಪ್ರೊ.ಹಂಸವೇಣಿ ಇದ್ದರು. (ವರದಿ : ಕೆ.ಎಂ.ಆರ್)