ಕರ್ನಾಟಕ

ಅಡಕೆ ನಿಷೇಧಿಸಲು ಬಿಡುವುದಿಲ್ಲ ಎಂದು ಹೇಳುವಲ್ಲಿ ಅಮಿತ್ ಷಾ ಹಾಗೂ ಯಡಿಯೂರಪ್ಪ ವಿಫಲ : ಮಧು ಬಂಗಾರಪ್ಪ

ರಾಜ್ಯ(ಶಿವಮೊಗ್ಗ)ಮಾ.29;- ಅಮಿತ್ ಷಾ ಅಡಕೆ ಬೆಳೆಗಾರರಿಗೆ ದ್ರೋಹ ಮಾಡಿದವರು.ಅಡಕೆ ಬೆಳೆಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಅಡಕೆ ನಿಷೇಧಿಸಲು ಬಿಡುವುದಿಲ್ಲ ಎಂದು ಹೇಳುವಲ್ಲಿ ಅಮಿತ್ ಷಾ ಹಾಗೂ ಯಡಿಯೂರಪ್ಪ ವಿಫಲವಾಗಿದ್ದಾರೆ ಎಂದು ಜೆಡಿಎಸ್ ನ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಮಿತ್ ಷಾ ಅಡಕೆ ಬೆಳೆಗಾರರ ಹೆಸರಲ್ಲಿ ತೀರ್ಥಹಳ್ಳಿಯಲ್ಲಿ ಸಮಾವೇಶ ನಡೆಸಿದ್ದಾರೆ. ಅಮಿತ್ ಷಾ ಅಡಕೆ ಬೆಳೆಗಾರರಿಗೆ ದ್ರೋಹ ಮಾಡಿದವರು.ಅಡಕೆ ಬೆಳೆಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ.ಅಡಕೆ ನಿಷೇಧಿಸಲು ಬಿಡುವುದಿಲ್ಲ ಎಂದು ಹೇಳುವಲ್ಲಿ ಅಮಿತ್ ಷಾ ಹಾಗೂ ಯಡಿಯೂರಪ್ಪ ವಿಫಲವಾಗಿದ್ದಾರೆ. ಜೆಡಿಎಸ್ ಅಡಕೆ ಬೆಳೆಗಾರರ ರಕ್ಷಣೆ ಮಾಡಲು ಬದ್ಧವಾಗಿರುತ್ತದೆ. ಅಡಕೆ ಬೆಳೆಗಾರರ ಹೆಸರಿನಲ್ಲಿ ಇಬ್ಬರು ನಾಯಕರ ಸಂಧಾನ ಮಾಡಿದರು.‌ಸಂಧಾನ ಎಷ್ಟರ ಮಟ್ಟಿಗೆ ಫಲಪ್ರದವಾಗಿದೆ ಎಂಬುದು ನಾಳೆಯಿಂದ ತಿಳಿಯಲಿದೆ. ಪ್ರಚಾರಕ್ಕೆ ಬಿಜೆಪಿಯವರಿಗೆ ಮುಷ್ಟಿ ಅಕ್ಕಿ ಆಂದೋಲನ ಬೇಕು. ಆದರೆ ರೈತರಿಗೆ ಬೆಂಬಲ ಬೆಲೆ ನೀಡುವುದಿಲ್ಲ. ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳು ಹಗುರವಾಗಿ ತೆಗೆದುಕೊಳ್ಳಬಾರದು. ರಾಷ್ಟ್ರೀಯ ಪಕ್ಷಗಳ ನಾಯಕರು ಕರ್ನಾಟಕಕ್ಕೆ ಬಂದಾಗ ಕನ್ನಡದಲ್ಲಿ ಮಾತನಾಡುತ್ತಾರೆ. ಆದರೆ ಮಹಾದಾಯಿ ವಿಷಯವನ್ನು ಪ್ರಸ್ತಾಪಿಸುವುದೇ ಇಲ್ಲ. ರಾಹುಲ್ ಗಾಂಧಿ ಪಾಪಾ ಪಾಂಡು. ಅವರು ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರಿಗೆ ರಾಜಕೀಯದ ಅನುಭವವಾದಷ್ಟು ವಯಸ್ಸು ರಾಹುಲ್ ಗಾಂಧಿಗೆ ಆಗಿಲ್ಲ. ಚುನಾವಣಾ ಗಿಮಿಕ್ ಮಾಡುವುದನ್ನು ಬಿಡಬೇಕು. ರಾಷ್ಟ್ರೀಯ ಪಕ್ಷಗಳು ಜಾತಿ ಧರ್ಮಗಳನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣ ಮಾಡಬಾರದು. ಮಾರ್ಚ್ 5 ರಂದು ಶಿಕಾರಿಪುರಕ್ಕೆ ಎಚ್.ಡಿ.ಕುಮಾರ ಸ್ವಾಮಿ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸನ್ನು ಸಂಪೂರ್ಣ ನಿರ್ನಾಮ ಮಾಡಲು ರಾಹುಲ್ ಗಾಂಧಿ ಒಬ್ಬರೇ ಸಾಕು. ರಾಹುಲ್ ಗಾಂಧಿ ಅವರ ಪಕ್ಷದ ಬಗ್ಗೆ ಮಾತನಾಡಿಕೊಳ್ಳಲಿ. ಅದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ  ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: