ಕರ್ನಾಟಕ

ಚನ್ನಪಟ್ಟಣದಲ್ಲಿಯೇ ಚುನಾವಣೆಗೆ ಸ್ಪರ್ಧಿಸುತ್ತೇನೆ : ಸಿ.ಪಿ.ಯೋಗೇಶ್ವರ್

ರಾಜ್ಯ(ರಾಮನಗರ)ಮಾ.29:-  ಚನ್ನಪಟ್ಟಣದಲ್ಲಿಯೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಬಿಜೆಪಿಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ರಾಮನಗರ- ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೊಕೆ ನಾನು ಏನ್ ಕುಮಾರಸ್ವಾಮಿನಾ? ಕುಮಾರಸ್ವಾಮಿ ಇಷ್ಟ ಬಂದಕಡೆ ಸ್ಪರ್ಧೆ ಮಾಡುತ್ತಾರೆ. ನನಗೆ ಚನ್ನಪಟ್ಟಣ ಕ್ಷೇತ್ರ ಇದೆ ಅಲ್ಲಿ 20 ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಚನ್ನಪಟ್ಟಣ ಜನತೆಯ ಮೇಲೆ ನಂಬಿಕೆ ಇದೆ ಅಲ್ಲೇ ಸ್ಪರ್ಧೆ ಮಾಡುತ್ತೇನೆ. ಹೆಚ್.ಡಿ.ಕೆ ಅವರದ್ದು ಸ್ವಂತ ಪಕ್ಷ  ಅವರು ಎಲ್ಲಿ ಬೇಕಾದರೂ ಬಿ   ಫಾರಂ ಕೊಡುತ್ತಾರೆ ಕಿತ್ತು ಕೊಳ್ಳಬಹುದು. 224 ಕ್ಷೇತ್ರಗಳಲ್ಲೂ ಹೆಚ್.ಡಿ.ಕೆ ಅವರೇ ಸ್ಪರ್ಧೆ ಮಾಡಬಹುದು. ನಮ್ಮದು ರಾಷ್ಟ್ರೀಯ ಪಕ್ಷ. ಅದಕ್ಕೆ ಸಿದ್ದಾಂತಗಳಿವೆ. ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಬಳಿ ಚರ್ಚೆ ನಡೆಸುತ್ತೇವೆ. ನನಗೆ ಎರಡು ಮೂರು ಆಸೆಗಳಿಲ್ಲ. ನನಗೆ ಒಂದೇ ಕ್ಷೇತ್ರ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: