ಮೈಸೂರು

ವಾಹನ ಸಂಚಾರ ನಿರ್ಬಂಧ : ಬದಲಿ ಮಾರ್ಗ

ಮೈಸೂರು ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ಧನ್ವಂತ್ರಿ ರಸ್ತೆ ಸಂಧಿಸುವ ಸ್ಥಳದಲ್ಲಿ ಜೆ.ಕೆ.ಮೈದಾನದಿಂದ ಪೂರ್ವಕ್ಕೆ ಮಳೆ ನೀರು ಚರಂಡಿಗೆ ಸೇತುವೆ ನಿರ್ಮಾಣ ಕಾಮಗಾರಿ ಸಂಬಂಧ ಕೆಳಕಂಡಂತೆ ವಾಹನ ಸಂಚಾರ ನಿರ್ಬಂಧ ಮತ್ತು ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ವಾಹನ ಸಂಚಾರದ ನಿರ್ಬಂಧ

ದಿವಾನ್ಸ್ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ಧನ್ವಂತ್ರಿ ರಸ್ತೆ ಸಂಧಿಸುವ ಜಂಕ್ಷನ್‍ನಿಂದ ಉತ್ತರಕ್ಕೆ ಜೆ.ಕೆ. ಮೈದಾನದ ಪೂರ್ವ ದ್ವಾರದ ಜಂಕ್ಷನ್‍ವರೆಗೆ  ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನ ಸಂಚಾರ ಬದಲಿ ಮಾರ್ಗ

ದಿವಾನ್ಸ್ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ಧನ್ವಂತ್ರಿ ರಸ್ತೆ ಜಂಕ್ಷನ್ ನಿಂದ ಉತ್ತರಕ್ಕೆ ಸಂಚರಿಸುತ್ತಿದ್ದ ವಾಹನಗಳು ಧನ್ವಂತ್ರಿ ರಸ್ತೆಯಲ್ಲಿಯೇ ಪಶ್ಚಿಮಕ್ಕೆ ಸಾಗಿ ದಾಸಪ್ಪ ವೃತ್ತ ತಲುಪಿ ಜೆ.ಎಲ್.ಬಿ. ರಸ್ತೆ ಮೂಲಕ ಮುಂದೆ ಸಾಗಬೇಕು.

ದಿವಾನ್ಸ್ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ಜೆ.ಕೆ. ಮೈದಾನದ ಪೂರ್ವ ದ್ವಾರದ ಜಂಕ್ಷನ್‍ನಿಂದ ದಕ್ಷಿಣಕ್ಕೆ ಸಂಚರಿಸುತ್ತಿದ್ದ ವಾಹನಗಳು ಜೆ.ಕೆ. ಮೈದಾನ ವೃತ್ತದಲ್ಲಿ ರೈಲ್ವೆ ನಿಲ್ದಾಣ ವೃತ್ತ ಇಲ್ಲವೇ ಆಯುರ್ವೇದಿಕ್ ಆಸ್ಪತ್ರೆ ವೃತ್ತ ತಲುಪಿ ಮುಂದೆ ಸಾಗಬೇಕು.

ಮೇಲ್ಕಂಡ ವಾಹನ ಸಂಚಾರ ಮಾರ್ಗ ನಿರ್ಭಂದ ಮತ್ತು ಬದಲಿ ಮಾರ್ಗವು  60 ದಿನಗಳ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: