ಸುದ್ದಿ ಸಂಕ್ಷಿಪ್ತ
ಮಾ.31ಕ್ಕೆ ಪ್ರೊ.ಉಷಾರಾಣಿಯವರ ಬೀಳ್ಕೊಡುಗೆ
ಮೈಸೂರು,ಮಾ.29 : ಮೈವಿವಿಯ ಕಲಾ ನಿಕಾಯನದ ಡೀನ್ ಆದ ಪ್ರೊ. ಎನ್.ಉಷಾರಾಣಿ ಅವರಿಗೆ ಮಾ.31ರಂದು ಬೆಳಗ್ಗೆ 11ಕ್ಕೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಾಗಿದೆ.
ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದ ಮೀಡಿಯ ಸೆಂಟರ್ ಹಾಲ್ ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಧ್ಯಾಪಕರು, ಸಿಬ್ಬಂದಿ ಸಂಶೋಧನ ವಿದ್ಯಾರ್ಥಿಗಳು, ಅಭಿಮಾನಿಗಳು ಉಷಾರಾಣಿಯವರನ್ನು ಬೀಳ್ಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)