
ಪ್ರಮುಖ ಸುದ್ದಿವಿದೇಶ
ಬ್ರೆಜಿಲ್ ಫುಟ್ಬಾಲ್ ಆಟಗಾರರಿದ್ದ ವಿಮಾನ ಪತನ
ಬ್ರೆಜಿಲ್ ಫುಟ್ಬಾಲ್ ತಂಡದ ಆಟಗಾರರೂ ಸೇರಿ 72 ಮಂದಿಯಿದ್ದ ವಿಮಾನವೊಂದು ಕೊಲಂಬಿಯಾದಲ್ಲಿ ಪತನವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಬುಧವಾರದಂದು ಮೆಡಿಲಿನ್ನಲ್ಲಿ ಅಟ್ಲೆಟಿಕೊ ನ್ಯಾಸಿನಲ್ ವಿರುದ್ಧ ‘ಕೊಪಾ ಸೂಡಮೆರಿಕಾನ’ ಅಂತಿಮ ಪಂದ್ಯಾವಳಿ ಆಡಲು ತೆರಳುತ್ತಿತ್ತು ಎನ್ನಲಾಗಿದೆ. ಕೆಲ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆಗಳಿವೆ ಎಂದು ಮೆಡಿಲಿನ್ ಮೇಯರ್ ಫೆಡರಿಕೊ ಹೇಳಿದ್ದಾರೆ. ಬೊಲಿವಿಯಾದಿಂದ ಹೊರಟ ಈ ವಿಮಾನವು ಮಧ್ಯರಾತ್ರಿ ವೇಳೆ ಪರ್ವತ ಶ್ರೇಣಿಗಳ ನಡುವೆ ಪತನವಾಗಿರಬಹುದೆಂದು ಶಂಕಿಸಲಾಗಿದೆ. ಆಂಬ್ಯಲೆನ್ಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ವಿಮಾನ ಪತನಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.