ಕರ್ನಾಟಕ

‘ಕೊಡಗು ಜಿಲ್ಲಾ ಬಂಟ್ರೆ ಗೊಬ್ಬುದ ಐಸಿರ-2018’ ಮೇ 18 ಕ್ಕೆ ಚಾಲನೆ

ರಾಜ್ಯ(ಮಡಿಕೇರಿ )ಮಾ.29 :-  ಕೊಡಗು ಜಿಲ್ಲಾ ಬಂಟರ ಸಂಘದ 5ನೇ ವರ್ಷದ ಜಿಲ್ಲಾ ಮಟ್ಟದ  ವಾರ್ಷಿಕ ಕ್ರೀಡೋತ್ಸವ ‘ಕೊಡಗು ಜಿಲ್ಲಾ ಬಂಟ್ರೆ ಗೊಬ್ಬುದ ಐಸಿರ-2018’ ಮೇ 18 ರಿಂದ 20ರವರೆಗೆ ವೀರಾಜಪೇಟೆಯ ನೀಲುಮಾಡು ಹೋಬಳಿ ಬಂಟರ ಸಂಘದ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮತ್ತು ಪದಾಧಿಕಾರಿಗಳು, ಈ ಹಿಂದೆ ಜಿಲ್ಲಾ ಮಟ್ಟದ ಕ್ರೀಡೋತ್ಸವವನ್ನು ಮೇ11 ರಿಂದ 13ರವರೆಗೆ ಆಯೋಜಿಸಲಾಗಿತ್ತಾದರೂ, ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಎಂದರು. ಜಿಲ್ಲೆಯಲ್ಲಿ ನೆಲೆಸಿರುವ ಬಂಟರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಮೇ18 ರಂದು ಕ್ರಿಡೋತ್ಸವವನ್ನು ಉದ್ಯಮಿಗಳಾದ ಜಗದೀಶ್ ರೈ  ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೀಲುಮಾಡುಗುತ್ತುವಿನ ಯಜಮಾನ ದೇವಪ್ಪ ರೈ ವಹಿಸಲಿದ್ದಾರೆ. ಮೇ20 ರಂದು ಸಂಜೆ 5.30 ಗಂಟೆಗೆ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಬಿ.ಡಿ. ನಾರಾಯಣ ರೈ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರದ  ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷದ್‍ನ ದ.ಕ.ಜಿಲ್ಲಾ ಗೋರಕ್ಷಾ ಪ್ರಮುಖ್ ಅಶೋಕ್ ಶೆಟ್ಟಿ ಸರಪ್ಪಾಡಿ ಹಾಗೂ ಮಂಗಳೂರಿನ ಕೋಸ್ಟಲ್ ಫಾಮ್ರ್ಸ್‍ನ ವ್ಯವಸ್ಥಾಪಕ ಪಾಲುದಾರ ಪಿ.ಎಸ್. ಪ್ರಕಾಶ್ ಶೆಟ್ಟಿ ಅವರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಶೆಟ್ಟಿ, ವೀರಾಜಪೇಟೆಯ ವಕೀಲ ರತ್ನಾಕರ ಶೆಟ್ಟಿ, ಉದ್ಯಮಿ ಬಾಲಕೃಷ್ಣ ರೈ, ಮಡಿಕೇರಿ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ, ನಗರ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಕುಶಲತಾ ಶೆಟ್ಟಿ ಮತ್ತಿತರರು  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸ್ಪರ್ಧೆಗಳು- ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗ ಜಗ್ಗಾಟ, 100 ಮೀಟರ್ ಓಟ, ಗುಂಡು ಎಸೆತ,  ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ, ಬಾಂಬ್ ಸ್ಫೋಟ, 100 ಮೀಟರ್ ಓಟ, ಗುಂಡು ಎಸೆತ,  ಮಕ್ಕಳಿಗೆ ಕಪ್ಪೆ ಜಿಗಿತ, 50 ಮೀಟರ್ ಓಟದ ಸ್ಪರ್ಧೆಗಳು ನಡೆಯಲಿದೆಯೆಂದು ಮಾಹಿತಿ ನೀಡಿದರು.

ಕಳೆದ ಬಾರಿ ಕ್ರಿಕೆಟ್ ಪಂದ್ಯಾಟದಲ್ಲಿ 42 ತಂಡಗಳು ಭಾಗವಹಿಸಿದ್ದು, ಈ ಬಾರಿ ಇನ್ನೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ.ತಂಡಗಳ ನೋಂದಣಿಗೆ ಏ.13 ಕೊನೆಯ ದಿನವಾಗಿದ್ದು, ನೀಲುಮಾಡು ಹೋಬಳಿಯ ಕ್ರೀಡಾಕೂಟದ ಆಯೋಜಕರನ್ನು ಸಂಪರ್ಕಿಸಿ ತಂಡಗಳನ್ನು ನೋಂದಣಿ ಮಾಡಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ 7619433531, 9482923541, 9483000930ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು.

ಮಡಿಕೇರಿ ತಾಲೂಕು ಬಂಟರ ಸಂಘದ ಯವ ಘಟಕದ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಸಮಾರೋಪ ಸಮಾರಂಭದ ಬಳಿಕ ತುಳು ಚಿತ್ರರಂಗದ ಹಾಸ್ಯನಟ ಮಂಜುರೈ ಮೂಳೂರು ಅವರ ನಿರೂಪಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವೀರಾಜಪೇಟೆಯ ನಕ್ಷತ್ರ ನೃತ್ಯ ಕಲಾ ತಂಡದಿಂದ ನವಶಕ್ತಿ ವೈಭವ ಮಹಿಷಾಸುರ ವಧೆ ಮತ್ತು ಯಕ್ಷ ನೃತ್ಯ ಸೇರಿದಂತೆ ‘ಬಂಟ ಪ್ರತಿಭೆಗಳ ಸಾಂಸ್ಕøತಿಕ ಕಲರವ’ ಜರುಗಲಿದೆ. ಸಾಂಸ್ಕøತಿಕ ಕಾರ್ಯಕ್ರಮ ನೀಡಲಿಚ್ಛಿಸುವ ಬಂಟ ಸಮುದಾಯದ ಪ್ರತಿಭೆಗಳು ಮೇ 2ರ ಒಳಗಾಗಿ ಹೆಸರುಗಳನ್ನು 9663175124ರಲ್ಲಿ ನೋಂದಾಯಿಸಬೇಕು ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಬಿ,ಡಿ. ನಾರಾಯಣ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ ಹಾಗೂ ಕ್ರೀಡಾ ಆಯೋಜನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ಲೀಲಾಧರ ರೈ  ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: