ದೇಶಪ್ರಮುಖ ಸುದ್ದಿ

ಬಿಜೆಪಿಯ ಎಲ್ಲ ಶಾಸಕರು, ಸಂಸದರು ಬ್ಯಾಂಕ್‍ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ: ಮೋದಿ

ನವದೆಹಲಿ: ಎಲ್ಲ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ ಎಂದು ಬಿಜೆಪಿ ಸಂಸದರು, ಶಾಸಕರಿಗೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ.

ನ.8ರಿಂದ ಡಿಸೆಂಬರ್ 31ರವರೆಗೆ ನಡೆಸಿರುವ ಮತ್ತು ನಡೆಸುವ ಬ್ಯಾಂಕ್‍ ವ್ಯವಹಾರಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಮಾಹಿತಿ ನೀಡುವಂತೆ ಮಂಗಳವಾರದಂದು ಆದೇಶಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅವರು ಈ ಬಗ್ಗೆ ಪ್ರಸ್ತಾಪಿಸಿದರು.

ಐಟಿ ತಿದ್ದುಪಡಿ ವಿಧೇಯಕವು ಕಪ್ಪುಹಣವನ್ನು ಬಿಳಿ ಮಾಡಲು ರೂಪಿಸಿಲ್ಲ. ಬದಲಾಗಿ ಬಡವರಿಂದ ಕೊಳ್ಳೆ ಹೊಡೆದಿರುವ ಕಪ್ಪುಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ಹೇಳಿದರು.

 

Leave a Reply

comments

Related Articles

error: