ಕರ್ನಾಟಕ

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಚಿಕ್ಕಮಗಳೂರು,ಮಾ.31: ಸಾಲಬಾಧೆ ತಾಳಲಾರದೇ ರೈತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆ ಮೋಹನ್ ಕುಮಾರಿ(38). ಕೃಷ್ಟಿಯನ್ನು ಅವಲಂಭಿಸಿ ಜೀವನ ಸಾಗಿಸುತ್ತಿದ್ದ ಮೋಹನ್ ಕುಮಾರಿ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು ಐದು ಲಕ್ಷ ಸಾಲ ಮಾಡಿ ಬೆಳೆ ಮೇಲೆ ಹಾಕಿದ್ದರು. ಆದರೆ ಮಳೆಯಿಲ್ಲದೆ ಬರಗಾಲದ ಹಿನ್ನಲ್ಲೆಯಲ್ಲಿ ಕಾಫಿ-ಮೆಣಸು ಬೆಳೆ ಬರಲಿಲ್ಲ.  ಇನ್ನೊಂದೆಡೆ ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಗೋಣಿಬೀಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ.ಎಸ್ )

Leave a Reply

comments

Related Articles

error: