ಕ್ರೀಡೆದೇಶ

ಐಪಿಎಲ್: ಡೇವಿಡ್ ವಾರ್ನರ್ ಬದಲಿಗೆ ಅಲೆಕ್ಸ್ ಹಾಲೆಸ್

ಮುಂಬೈ,ಮಾ.31-ಐಪಿಎಲ್ 11ನೇ ಆವೃತ್ತಿ ಏಪ್ರಿಲ್ 7 ರಿಂದ ಆರಂಭವಾಗಲಿದೆ. ಈ ನಡುವೆ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷಗಳ ಕಾಲ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಡೇವಿಡ್ ವಾರ್ನರ್ ಬದಲಿಗೆ ಇಂಗ್ಲೆಂಡ್ ತಂಡದ ಬಲಗೈ ಬ್ಯಾಟ್ಸ್ ಮೆನ್ ಅಲೆಕ್ಸ್ ಹಾಲೆಸ್ ಅನ್ನು ಸನ್ ರೈರ್ಸರ್ ಹೈದರಾಬಾದ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಹರಾಜಿನಲ್ಲಿ ಈ ಆಟಗಾರನ ಮೂಲ ಬೆಲೆ 1 ಕೋಟಿ ರೂ. ಇದ್ದು, ಸನ್ ರೈರ್ಸರ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ತಂಡದ ಪ್ರಕಟಣೆ ತಿಳಿಸಿದೆ. ಈಗಾಗಲೇ ತಂಡದ ನಾಯಕನನ್ನಾಗಿ ಕೇನ್ ವಿಲಿಯಮ್ಸ್ ನ್ ಅವರನ್ನು ನೇಮಕ ಮಾಡಲಾಗಿದೆ. ಅಲೆಕ್ಸ್ ಹಾಲೆಸ್ ಇಂಗ್ಲೆಂಡ್ ತಂಡದ ಪರ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟ್ಸ್ ಮೆನ್ ಆಗಿದ್ದಾರೆ.

ವಿರೂಪ ಪ್ರಕರಣದಲ್ಲಿ ಸ್ಮಿತ್, ವಾರ್ನರ್ ತಲಾ ಒಂದು ವರ್ಷ ಹಾಗೂ ಬ್ಯಾಂಕ್ ಕ್ರಾಪ್ಟ್ ಗೆ 9 ತಿಂಗಳು ನಿಷೇಧ ಹೇರಲಾಗಿದೆ. ಈ ಮೂವರು ಆಟಗಾರರು ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ 3ನೇ ಟೆಸ್ಟ್ ನಲ್ಲಿ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರು. (ಎಂ.ಎನ್)

Leave a Reply

comments

Related Articles

error: