ಪ್ರಮುಖ ಸುದ್ದಿವಿದೇಶ

ಬ್ರೆಜಿಲ್ ವಿಮಾನ ಪತನ: 6 ಮಂದಿ ಪಾರು

ಕೊಲಂಬಿಯಾದಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಸುಮಾರು 25 ಶವಗಳನ್ನು ಹೊರತೆಗೆಯಲಾಗಿದ್ದು, 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಬ್ರೆಜಿಲ್ ಫುಟ್‍ಬಾಲ್‍ ಆಟಗಾರರು ಸೇರಿ ಸುಮಾರು 81 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಚಾರ್ಟೆಡ್ ವಿಮಾನ ಕೊಲಂಬಿಯಾ ಪರ್ವತ ಶ್ರೇಣಿಯಲ್ಲಿ ಪತನವಾಗಿತ್ತು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಬ್ರೆಜಿಲ್ ಫುಟ್‍ಬಾಲ್ ತಂಡದ ನಾಯಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೆಡಿಲಿನ್ ಮೇಯರ್ ಫೆಡರಿಕೊ ಅವರು ತಿಳಿಸಿದ್ದಾರೆ. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು 25ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವಿಮಾನ ಅಪಘಾತಕ್ಕೆ ವಿದ್ಯುತ್ ಸಮಸ್ಯೆಯೇ ಕಾರಣ ಎಂದು ದುರಂತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ತಜ್ಞರ ತಂಡ ತಿಳಿಸಿದೆ.

flight-2

Leave a Reply

comments

Related Articles

error: