ಪ್ರಮುಖ ಸುದ್ದಿ

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ರಾಹುಲ್ ಗಾಂಧಿಗೆ ಲಾಭ..?

ದೇಶ(ನವದೆಹಲಿ)ಮಾ.31:- ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ ಸಿ-ಫೋರ್ ಎನ್ನುವ ಏಜೆನ್ಸಿಯೊಂದರ ಸಮೀಕ್ಷೆಯಂತೆ ಕಾಂಗ್ರೆಸ್ 224 ಸ್ಥಾನದಲ್ಲಿ 109-120 ಸ್ಥಾನಗಳನ್ನು ಗೆಲ್ಲಬಹುದೆಂದು ಇತ್ತೀಚೆಗೆ ವರದಿ ಮಾಡಿತ್ತು. ಬಿಜೆಪಿ-40-60 ಬಹುಮತ ಪಡೆಯಲು 113 ಸ್ಥಾನಗಳ ಅವಶ್ಯಕತೆಯಿದ್ದು, ಎರಡನೇ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದಾಗಿದ್ದು, ಬಿಜೆಪಿ ಬಹುಮತ ಪಡೆಯಲು ಅಸಫಲವಾಗಬಹುದು ಎಂದು ಸಮೀಕ್ಷೆಯ ವರದಿಯ ವೇಳೆ ತಿಳಿಸಿತ್ತು. ಹಾಗಿದ್ದರೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಗೆ ಲಾಭವೇನು? ಬಿಜೆಪಿಯ ಮೇಲೆ ಬೀರುವ ಪರಿಣಾಮವೇನು?

ಕಾಂಗ್ರೆಸ್ ಗೆಲುವು ಸಾಧಿಸಿದಲ್ಲಿ ರಾಹುಲ್ ಗಾಂಧಿಯವರಿಗೆ ಒಳ್ಳೆಯ ಲಾಭವಿದೆ. ಯಾಕೆಂದರೆ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಅವರ ನೇತೃತ್ವದಲ್ಲಿಯೇ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೀರ್ತಿ ಅವರಿಗೆ ಸಲ್ಲಲಿದೆ. ಪಕ್ಷದ ಮನೋಸ್ಥೈರ್ಯವೂ ಹೆಚ್ಚಲಿದೆ. ಇದರ ಜೊತೆ ರಾಹುಲ್ ಗಾಂಧಿಯವರ ಘನತೆಯೂ ಹೆಚ್ಚಲಿದೆ. ಕರ್ನಾಟಕದ ನಂತರ ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಛತ್ತೀಸ್ ಗಡಗಳಲ್ಲಿಯೂ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಗೆಲುವಿನ ಹುಮ್ಮಸ್ಸಿನಲ್ಲಿ ಕಾರ್ಯನಿರ್ವಹಿಸಲಿದೆ. ಅಷ್ಟೇ ಅಲ್ಲದೇ ವಿಪಕ್ಷಗಳೊಂದಿಗೆ 2019ರ ಚುನಾವಣೆಯಲ್ಲಿ ಮೈತ್ರಿ ಸಾಧಿಸುವ ಸಾಮರ್ಥ್ಯ ಹೊಂದಲಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಪಕ್ಷದ ಜೊತೆ ಜೊತೆಗೆ ಸಿದ್ದರಾಮಯ್ಯನವರ ಗೆಲುವು ಕೂಡ ಆಗಲಿದೆ ಎಂದು ದೆಹಲಿಯ ಮಾಧ್ಯಮವೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: