ಮೈಸೂರು

ಅನುಮತಿಯಿಲ್ಲದೇ ಸಾಗುತ್ತಿದ್ದ ಚುನಾವಣಾ ಪ್ರಚಾರ ವಾಹನ ಪೊಲೀಸರ ವಶಕ್ಕೆ

ಮೈಸೂರು,ಮಾ.31:- ಅನುಮತಿಯಿಲ್ಲದೇ ಸಾಗುತ್ತಿದ್ದ ಚುನಾವಣಾ ಪ್ರಚಾರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಇಲವಾಲ ಬಳಿ ನಡೆದಿದೆ.

ಆನಂದೂರಿನಲ್ಲಿ ಮಯುಖ್ಯಮಂತ್ರಿ ಸಿದ್ದರಾಮಯ್ಯ ರೋಡ್ ಶೋ ನಡೆಸಿದ್ದರು. ಈ ವೇಳೆ ರೋಡ್ ಶೋ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾರುಗಳನ್ನು ಬಳಸಲಾಗಿತ್ತು ಎನ್ನಲಾಗಿದೆ. ಇದರಿಂದ ಆನಂದೂರಿನಲ್ಲಿ ಎರಡು ಕಾರನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಾರುತಿ ಸುಜುಕಿ ಮತ್ತು ಸ್ವಿಫ್ಟ್ ಕಾರುಗಳನ್ನು ಸೀಜ್ ಮಾಡಲಾಗಿದ್ದು, ಅನುಮತಿ ಇಲ್ಲದೆ ಪ್ರಚಾರದ ವೇಳೆ ಕಾರುಗಳು ಸಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಇಲವಾಲ ಪೊಲೀಸ್ ರು ಈ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: