ಮೈಸೂರು

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಹಾಯವಾಣಿ ಪ್ರಾರಂಭ

ಮೈಸೂರು,ಏ.1:-  ವಿಧಾನ ಸಭಾ ಚುನಾವಣೆ-2018ರ  ಚುನಾವಣಾ ನೀತಿ ಸಂಹಿತೆ ಸಂಬಂಧ ಎಲ್ಲಾ ವಿಧಾನಸಭಾ  ಕ್ಷೇತ್ರವಾರು  ಸಹಾಯವಾಣಿ ದೂರವಾಣಿ ಸಂಖ್ಯೆ ಕಲ್ಪಿಸಲಾಗಿದೆ.

ಚಾಮರಾಜ ಕ್ಷೇತ್ರ, ಕೃಷ್ಣರಾಜ ಕ್ಷೇತ್ರ, ನರಸಿಂಹರಾಜ ಕ್ಷೇತ್ರ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಿಗೆ ಸಹಾಯವಾಣಿ ಸಂಖ್ಯೆ: 0821-2424234, ವರುಣ ಕ್ಷೇತ್ರ, ತಿ.ನರಸೀಪುರ ಕ್ಷೇತ್ರ, ನಂಜನಗೂಡು ಕ್ಷೇತ್ರಗಳಿಗೆ ಸಹಾಯವಾಣಿ ಸಂಖ್ಯೆ: 0821-2424294, ಕೆ.ಆರ್.ನಗರ ಕ್ಷೇತ್ರ, ಹುಣಸೂರು ಕ್ಷೇತ್ರ, ಪಿರಿಯಾಪಟ್ಟಣ ಕ್ಷೇತ್ರ ಮತ್ತು ಹೆಚ್.ಡಿ.ಕೋಟೆ ಕ್ಷೇತ್ರಗಳಿಗೆ ಸಹಾಯವಾಣಿ ಸಂಖ್ಯೆ: 0821-2424284 ಇದೆ. ವಿಕಲಚೇತನರ ದೂರವಾಣಿಗೆ ವಿಶೇಷವಾಗಿ ಸ್ಪಂದಿಸುವ ದೃಷ್ಟಿಯಿಂದ ಪ್ರತ್ಯೇಕ ಸಹಾಯವಾಣಿ ಸಂಖ್ಯೆ: 0821-2424235 ನ್ನು ನೀಡಲಾಗಿದೆ ಎಂದು ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿ ಶಿವಕುಮಾರ್ ಸಿ.  ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: