ಮೈಸೂರು

ಮಾಜಿ ಮೇಯರ್ ಸಂದೇಶ್ ಸ್ವಾಮಿಯವರನ್ನು ಬೆಂಬಲಿಸಿ : ಜೆಡಿಎಸ್ ಗೆ ರಾಜೀನಾಮೆ

ಮೈಸೂರು,ಏ.2 : ಜೆಡಿಎಸ್ ಪಕ್ಷದಿಂದ ಮಾಜಿ ಮೇಯರ್ ಸಂದೇಶ್ ಸ್ವಾಮಿಯವರಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ಎನ್.ಆರ್.ಕ್ಷೇತ್ರ ಮಹಿಳಾ ಘಟಕದ ಅಧ್ಯಕ್ಷೆ ಪಿ. ಅಶ್ವಿನಿ ಸೇರಿದಂತೆ ಘಟಕದ ಪದಾಧಿಕಾರಿಗಳು ಇಂದು ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾಮೂಹಿಕ ರಾಜೀನಾಮೆ ಬಗ್ಗೆ ಸ್ಪಷ್ಟಪಡಿಸಿದ ಅಶ್ವಿನಿಯವರು, ಸಂದೇಶ್ ಸ್ವಾಮಿಯವರು ಕಳೆದ ವಿಧಾನ ಚುನಾವಣೆಯಲ್ಲಿ ಸೋತಿದ್ದರು ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿ ಸದಾ ಜನಸಂಪರ್ಕದಲ್ಲಿದ್ದಾರೆ, ಆದರೆ ಜೆಡಿಎಸ್ ಅವರನ್ನು ನಿರ್ಲಕ್ಷಿಸಿರುವುದು ಬೇಸರವಾಗಿದ್ದು ಆದ್ದರಿಂದ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದೇವೆ ಎಂದರು.

ಕಳೆದ 40 ವರ್ಷಗಳ ಕುಟುಂಬ ರಾಜಕಾರಣದಿಂದ ಎನ್.ಆರ್.ಕ್ಷೇತ್ರವು ಅಭಿವೃದ್ಧಿಯಿಂದ ಕುಂಠಿತವಾಗಿದ್ದು, ಕ್ಷೇತ್ರದ ಕ್ಯಾತಮಾರನಹಳ್ಳಿ, ಗಾಂಧಿನಗರ, ಕೆ.ಎನ್.ಪುರ, ಮುನೇಶ್ವರ ನಗರಗಳು ಹಳ್ಳಿಗಿಂತಲೂ ಕಡೆಯಾಗಿವೆ. ಅಲ್ಲದೇ ಹಿಂದುಳಿದ ವರ್ಗದವರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆದ ‘ಕರುನಾಡ ಜಾಗೃತಿ ಯಾತ್ರೆ’ ಸಂದರ್ಭದಲ್ಲಿ ಜೆಡಿಎಸ್ ನಿಂದ ತೊರೆದು ಸಂದೇಶ ಸ್ವಾಮಿಯವರು ಬಿಜೆಪಿ ಸೇರಿಸಿದ್ದರು. ಇವರನ್ನು ಬೆಂಬಲಿಸಿ ಅವರ ಅಭಿಮಾನಿ ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳ ರಾಜೀನಾಮೆ ಪರ್ವ ಆರಂಭವಾಗಿದೆ. ಎನ್.ಆರ್.ಕ್ಷೇತ್ರ ಮಹಿಳಾ ಘಟಕದ ಪದಾಧಿಕಾರಿಗಳಾದ  ಗಾಯಿತ್ರಿ, ಎಂ.ಪಾರ್ವತಿ, ಜಯಲಕ್ಷ್ಮೀ, ಕಾಂತಾಮಣಿ, ಸಾವಿತ್ರಮ್ಮ, ಶ್ವೇತಾ, ಹೇಮಾವತಿ, ಲೀಲಾ, ಮಹಾಲಕ್ಷ್ಮೀ, ಸುಧಾತ್ಯಾಗರಾಜ್, ಮೀನಾಕ್ಷಿ, ಮಂಗಳಗೌರಿ, ರೂಪ, ದಾನಿಯಮ್ಮ ಅವರುಗಳು ಇಂದು ನಗರಾಧ್ಯಕ್ಷ ಪ್ರೇಮಾಶಂಕರ್ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕಳಿಸಿದ್ದೇವೆ ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: