ಸುದ್ದಿ ಸಂಕ್ಷಿಪ್ತ
ಪುಸ್ತಕ ಪ್ರದರ್ಶನ ಮತ್ತು ನಿವೃತ್ತರಿಗೆ ಸನ್ಮಾನ ಸಮಾರಂಭ
ಮಹಾರಾಜ ಕಾಲೇಜಿನಲ್ಲಿ ನ.30 ರಂದು ಬೆ.11.30 ಕ್ಕೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಪುಸ್ತಕ ಪ್ರದರ್ಶನ ಹಾಗೂ ನಿವೃತ್ತರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ಎಚ್.ರಮೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹಾರಾಜ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಕಾಳಚನ್ನೇಗೌಡ ಮತ್ತು ಸ್ನಾತಕ ಗ್ರಂಥಾಲಯದ ಪರಿಚಾರಕ ಬೀರಯ್ಯ ಅವರನ್ನು ಸನ್ಮಾನಿಸಲಾಗುತ್ತದೆ.