ಸುದ್ದಿ ಸಂಕ್ಷಿಪ್ತ

ಏ.3ರಿಂದ ರೀ ಟ್ರೀಟ್ ಫಾರ್ ಫಾರ್ಮಸಿ ಸ್ಟೂಡೆಂಟ್ಸ್

ಮೈಸೂರು, ಏ.2 : ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರೀಶ್ವರ ದತ್ತಿ ನಿಧಿಯಿಂದ ರೀ ಟ್ರೀಟ್ ಫಾರ್ ಫಾರ್ಮಸಿ ಸ್ಟೂಡೆಂಟ್ಸ್ ಅನ್ನು ಏ.3 ರಿಂದ 5ರವರೆಗೆ ಸುತ್ತೂರಿನಲ್ಲಿ ಆಯೋಜಿಸಿದೆ.

ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸಾನಿಧ್ಯ ವಹಿಸುವರು.

ಧ್ಯಾನದ ಪ್ರಾಮುಖ್ಯತೆ ಬಗ್ಗೆ ಸ್ವಾಮಿ ಆತ್ಮನಂದಜೀ ತಿಳಿಸುವರು. ಶಿಬಿರದಲ್ಲಿ ಡಾ.ಕಿಶೋರ್, ಸ್ವಾಮಿ ಯುಕ್ತೇಶ್ ನಂದಾಜೀ, ಡಾ.ಶಿವರಾಜ ಪಾಟೀಲ್, ಡಾ.ವಿಶ್ವನಾಥ್, ಡಾ.ಪ್ರಶಾಂತ್ ಎಂ ವಿಶ್ವನಾಥ್ ಇನ್ನಿತರರು ಭಾಗಿಯಾಗಿ ವಿಶೇಷ ಉಪನ್ಯಾಸ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: