ಮೈಸೂರು

ಅಕ್ರಮ ಹುಕ್ಕಾ ಬಾರ್ ಬಂದ್ ಗೆ ಒತ್ತಾಯ

ಮೈಸೂರು,ಏ.2 : ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಹುಕ್ಕಾ ಬಾರ್ ಗಳನ್ನು ಬಂದ್ ಮಾಡಿಸಬೇಕೆಂದು ಮಾನವಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ.ಕಾರ್ತಿಕ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಜಂಬೂ ಬಜಾರ್ ನ ನೆಲ್ಸನ್ ಮಂಡೆಲಾ ರಸ್ತೆಯಲ್ಲಿನ ನೆಲ ಪಾಡ್ ಹೋಟೆಲ್ ನಲ್ಲಿರುವ ಕೆಫೆ ಹೈವೇ ಯು ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಹುಕ್ಕಾ ಬಾರ್, ಲೈವ್ ಬ್ಯಾಂಡ್, ಮಧ್ಯ ಮಾರಾಟ ಹಾಗೂ ಇನ್ನಿತರ ಚುಟುವಟಿಕೆಗಳನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದು ಹಲವು ಅಮಾಯಕರನ್ನುಜ ದಾರಿತಪ್ಪಿಸುವ ತಾಣವಾಗಿದೆ ಎಂದು ದೂರಿದ್ದಾರೆ.

ನಗರದಲ್ಲಿ ಇಂತಹ ಹಲವಾರು ಅಧಿಕೃತ ಲೈಸೆನ್ಸ್ ಪಡೆಯದ ಅಕ್ರಮ ಹುಕ್ಕಾ ಬಾರ್ ಗಳು ನಡೆಯುತ್ತಿದ್ದು ಇವುಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: