
ಕರ್ನಾಟಕ
ಕಲ್ಲುಗುಂಡಿಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ
ರಾಜ್ಯ(ಮಡಿಕೇರಿ) ಏ.2 :- ಕಲ್ಲುಗುಂಡಿ ಸಮೀಪ ಗುತ್ತಿಗಾರಿನ ಮಣಿ ಕುಮಾರ್ ಎಂಬುವವರ ಮನೆಯ ತೋಟದಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಜಾಲ್ಸೂರಿನ ಸ್ನೇಕ್ ಶ್ಯಾಮ್ ಪ್ರಸಾದ್ ಅವರು ಕಾಳಿಂಗ ಸರ್ಪವನ್ನು ಹಿಡಿದು ಪಿಲಿಕುಳ ನಿಸರ್ಗಧಾಮದ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ವಿಷಕಾರಿ ಕಾಳಿಂಗ ಹಾವಿನ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಅವರು ಹಾವುಗಳನ್ನು ಕೊಲ್ಲದಂತೆ ಕಿವಿ ಮಾತು ಹೇಳಿದರು. (ಕೆಸಿಐ,ಎಸ್.ಎಚ್)