ಸುದ್ದಿ ಸಂಕ್ಷಿಪ್ತ

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು, ಏ.3:- ಕೊಕ್ಕರೆಹುಂಡಿ ಗ್ರಾಮದ ಬಲರಾಮ ಎಂಬುವರು ಮೈಸೂರು -ಬನ್ನೂರು ಮುಖ್ಯ ರಸ್ತೆ ಕಂಚಗಾರಕಟ್ಟೆ ಹಳ್ಳದ ಬಳಿ ಅಪರಿಚಿತ ಗಂಡಸಿನ ಶವ ಕಂಡುಬಂದಿದ್ದು, ಈ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಅಪರಿಚಿತ ವ್ಯಕ್ತಿಯ ಗುರುತು, ವಯಸ್ಸು- 60 ರಿಂದ 70 ವರ್ಷ, ಎತ್ತರ 5.5 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ಕೃಶವಾದ ಶರೀರ, ಬಿಳಿ ಕೂದಲು, ಮುಖದಲ್ಲಿ ಬಿಳಿ ಗಡ್ಡ-ಮೀಸೆ ಬಿಟ್ಟಿರುತ್ತಾರೆ. ಮತ್ತು ಸಿಮೆಂಟ್ ಕಲರ್ ಶರ್ಟ್ ಧರಿಸಿರುತ್ತಾರೆ.
ಮೃತ ವ್ಯಕ್ತಿಯ ಬಗ್ಗೆ ಮಾಹಿತಿ  ತಿಳಿದು ಬಂದಲ್ಲಿ  ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು – 0821-2520040, ಮೈಸೂರು ಜಿಲ್ಲಾ ಕಂಟ್ರೋಲ್ ರೂಂ 0821-2444800 ಹಾಗೂ ವರುಣ ಪೊಲೀಸ್ ಠಾಣೆ 0821-259441 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: