ಕರ್ನಾಟಕಮನರಂಜನೆ

ಕಿನ್ನರಿ ನಕುಲ್ ವಿರುದ್ಧ ಎಫ್‍ಐಆರ್ ದಾಖಲು!

ಬೆಂಗಳೂರು,ಏ.03: ಕಿರುತೆರೆ ಕಿನ್ನರಿ ಧಾರಾವಾಹಿ ನಾಯಕ ಕಿರಣ್ ರಾಜ್ ವಿರುದ್ಧ ಮುಂಬೈನಲ್ಲಿ  ಎಫ್‍ಐಆರ್ ದಾಖಲಾಗಿದೆ.

ಕಿರಣ್​ ರಾಜ್​ ವಿರುದ್ಧ ಮಾಡೆಲ್​ ಯಾಸ್ಮಿನ್​ ಎಂಬಾಕೆ ಕಿರಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಸಂಬಂಧ ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲಿ ನಟ ಕಿರಣ್ ರಾಜ್, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಕಳೆದ 5 ವರ್ಷಗಳಿಂದ ನಾವಿಬ್ಬರು ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದು, ಇದೀಗ ಕಿರಣ್ ರಾಜ್ ತನ್ನ ಮದುವೆಯಾಗದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನ್ನನ್ನು ತಮ್ಮ ಸ್ನೇಹಿತರೊಂದಿಗೆ ಸೇರಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆಯಿಂದ ಯಾಸ್ಮಿನ್​ ಮುಖ, ಕೈ- ಕಾಲಿನ ಮೇಲೆ ಗಾಯದ ಗುರುತುಗಳಾಗಿವೆ ಎನ್ನಲಾಗಿದೆ. ಈ ದೂರು ಸಲ್ಲಿಸುವ ವೇಳೆ ನಟಿ ತಾವಿಬ್ಬರೂ ಜೊತೆಗಿರುವ ಫೋಟೋಗಳನ್ನೂ ಕೂಡ ಸಾಕ್ಷ್ಯವಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಯಾಸ್ಮಿನ್​ ವಿರುದ್ಧ ಕಿರಣ್ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಆರ್.ಆರ್. ನಗರ ಠಾಣೆಯಲ್ಲಿ ಕಿರಣ್​ ರಾಜ್​ ದೂರು ನೀಡಿದ್ದಾರೆ. (ವರದಿ: ಪಿ.ಎಸ್)

Leave a Reply

comments

Related Articles

error: