ಪ್ರಮುಖ ಸುದ್ದಿ

ಖುರ್ಚಿಯಿಂದ ಬಿದ್ದ ಸಿಎಂ ಸಿದ್ದರಾಮಯ್ಯ, ತಲೆಗೆ ಏಟು : ಆಸ್ಪತ್ರೆಗೆ ಭೇಟಿ

ರಾಜ್ಯ(ಬೆಂಗಳೂರು),,ಏ.3;- ಚುನಾವಣಾ ಪ್ರಚಾರದ ವೇಳೆ ಖುರ್ಚಿಯಿಂದ ಕೆಳಗೆ ಬಿದ್ದ ಸಿಎಂ ಸಿದ್ದರಾಮಯ್ಯ ತಲೆಗೆ ಏಟು ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಾವನಹಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಾಗ ಖುರ್ಚಿಯಿಂದ ಬಿದ್ದ ಅವರು ಹಿಂದಕ್ಕೆ ವಾಲಿದ್ದು, ಅವರ ತಲೆಗೆ ಸಣ್ಣಪುಟ್ಟ ಗಾಯಗಳಾಗಿತ್ತು, ನಿನ್ನೆಯೇ ಬೆಂಗಳೂರಿಗೆ ತೆರಳಿದ ಅವರು ಇಂದು ಬೆಳಿಗ್ಗೆ ವಿಕ್ರಂ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿಯಾಗಿದ್ದಾರೆ. ವೈದ್ಯರು ಇವರ ಬಿಪಿ, ಶುಗರ್ ಸೇರಿದಂತೆ ಆರೋಗ್ಯ ತಪಾಸಣೆ ನಡೆಸಿದ್ದು, ತಲೆಯ ಗಾಯದ ಪರೀಕ್ಷೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ತಲೆಗೆ ಹಚ್ಚಲು ಆಯಿಂಟ್ ಮೆಂಟ್ ನೀಡಲಾಗಿದೆ ಯಾವುದೇ ಅಪಾಯವಿಲ್ಲ ಎಂದಿದ್ದು, ವೈದ್ಯರ ಒಪ್ಪಿಗೆ ಪಡೆದೇ ಹುಬ್ಬಳ್ಳಿಗೆ ತೆರಳಿದ್ದಾರೆ. ನಿನ್ನೆ ತಲೆಗೆ ಏಟಾದ ಕಾರಣ ಅಂಬರೀಷ್ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆರಳಲಿಲ್ಲ ಎನ್ನಲಾಗಿದೆ. (ಕೆ.ಎಸ್,ಎಸ್ಎಚ್)

Leave a Reply

comments

Related Articles

error: