
ಬೆಂಗಳೂರು,ಏ.03: ಮೋಕ್ಷ ಸ್ವರ್ಣ ಚಂಪಾ ಅಗರಬತ್ತಿ ಕಂಪನಿಯಿಂದ ನಟ ಗೋಲ್ಡನ್ ಸ್ಟಾರ್ 75 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಚೆಲುವಿನ ಚಿತ್ತಾರದ ಪ್ರಚಾರದ ಸಲುವಾಗಿ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಅವಧಿ ಮುಗಿದ ಬಳಿಕವೂ ಸಂಸ್ಥೆ ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿತ್ತು. 2008ರಲ್ಲಿ ಒಪ್ಪಿಗೆಯಿಲ್ಲದೆ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತನ್ನ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿತ್ರನಟ ಗಣೇಶ್ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ವಿರುದ್ಧ 75 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಸಿಟಿ ಸಿವಿಲ್ ಕೋರ್ಟ್ ಮೋಕ್ಷ ಅಗರಬತ್ತಿ ಕಂಪನಿಗೆ ಗೆ ಆದೇಶ ನೀಡಿದೆ. (ವರದಿ: ಪಿ.ಎಸ್)