ಮೈಸೂರು

ಏ.11ರಂದು ಭಾರತೀಯ ರಿಪಬ್ಲಿಕನ್ ಪಕ್ಷದ ಸಮಾವೇಶ : ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಮೈಸೂರು,ಏ.3 : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏ.11ರಂದು ಭಾರತೀಯ ರಿಪಬ್ಲಿಕನ್ ಪಕ್ಷದ ಸಂಸ್ಥಾಪಕ ಪ್ರಕಾಶ್ ವೈ ಅಂಬೇಡ್ಕರ್ ಅವರು ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸುವ ಮೂಲಕ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡುವರು ಎಂದು ಪಕ್ಷದ ರಾಜ್ಯಾಧ್ಯಕ್ಷ ಆರ್.ಮೋಹನ್ ರಾಜ್ ತಿಳಿಸಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವಂಶಸ್ಥ (ಮೊಮ್ಮಗ) ಪ್ರಕಾಶ್ ವೈ ಅಂಬೇಡ್ಕರ್ ಸ್ಥಾಪಿಸಿರುವ ಆರ್ ಪಿಐ ಪಕ್ಷವು ಸಂವಿಧಾನ ಉಳಿವಿಗಾಗಿ ಚಳುವಳಿ, ಸಾಮಾಜಿಕ ಹೋರಾಟಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದಲೂ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಪಕ್ಷಗಳಾದ ಸಿಪಿಐ, ಸಿಪಿಐಎಂ ಇನ್ನಿತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು 2018ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಹುಮನಾಬಾದ್, ಉಡುಪಿ, ಬಾಗಲಕೋಟೆ, ವಿಜಯನಗರ ಸೇರಿದಂತೆ ಸುಮಾರು 10 ಜನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುವ ಸಮಾವೇಶದಲ್ಲಿ 2ನೇ ಪಟ್ಟಿ ಬಿಡುಗಡೆಗೊಳಿಸುವರು ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಂವಿಧಾನಕ್ಕೆ ಗಂಡಾಂತರ ಒದಗಿದೆ, ದೇಶದಲ್ಲಿ ಏಕ ತೆರಿಗೆ ಪದ್ಧತಿ ತಂದಂತೆ ಒಂದೇ ಸಂಸ್ಕೃತಿ- ಒಂದೇ ಧರ್ಮವನ್ನುರ ಜಾರಿಗೊಳಿಸಿದರು ಅಚ್ಚರಿಯಿಲ್ಲ, ಇವನ್ನೆಲ್ಲವನ್ನೂ ಕಾಂಗ್ರೆಸ್ ಮೌನವಾಗಿ ಸಮ್ಮತಿಸುವ ಮೂಲಕ ಪರೋಕ್ಷವಾಗಿ ಬೆಂಬಲಿಸುತ್ತಿದ್ದೆ, ಇಂತಹ ಮನುವಾದಿ ಪಕ್ಷಗಳಿಂದ ದಲಿತರ, ಶೋಷಿತರ ಏಳ್ಗೆ ಸಾಧ್ಯವಿಲ್ಲವೆಂದು ಹೇಳಿದರು.

ಆದ್ದರಿಂದ ಪ್ರಜಾಪ್ರಭುತ್ವದ ಉಳಿವಿಗಾಗಿ ಪಕ್ಷ ಶ್ರಮಿಸುತ್ತಿದ್ದು ರಾಜ್ಯದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 40 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧೆಗಿಳಿಯುವರು. ಅಂದಿನ ಸಮಾವೇಶದಲ್ಲಿ ವರುಣಾ, ಚಾಮುಂಡೇಶ್ವರಿ, ಹೆಚ್.ಡಿ.ಕೋಟೆ ಅಭ್ಯರ್ಥಿಗಳನ್ನು ಅವರು ಘೋಷಿಸುವರು ಎಂದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೌತಾಳ್, ಪದಾಧಿಕಾರಿಗಳಾದ ರಾಜಶೇಖರ ಮೂರ್ತಿ, ಹೇಮರಾಜ್, ವಿಠಲ್, ಸೋಮಣ್ಣ, ದೇವರಾಜ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: