ಮೈಸೂರು

ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ಪ್ರೊ.ಮುಜಾಫರ್ ಆಸ್ಸಾದಿಯವರಂತಹವರ ನಾಯಕತ್ವ ಅತ್ಯಗತ್ಯ : ಪ್ರೊ.ಜೆ.ಸೊಮಶೇಖರ್

ಮೈಸೂರು,ಏ.3:- ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ಪ್ರೊ.ಮುಜಾಫರ್ ಆಸ್ಸಾದಿಯವರಂತಹವರ ನಾಯಕತ್ವ ಅತ್ಯಗತ್ಯ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೊಮಶೇಖರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದ ಪತ್ರಿಕೋದ್ಯಮ ವಿಭಾಗದ ಸೆಮಿನಾರ್ ಹಾಲ್ ನಲ್ಲಿಂದು ರಾಜ್ಯಶಾಸ್ತ್ರ ಅದ್ಯಯನ ವಿಭಾಗವತಿಯಿಂದ ನೂತನ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷಾಧಿಕಾರಿಯಾಗಿ ನೇಮಕವಾಗಿರುವ ಪ್ರೊ.ಮುಜಾಫರ್ ಆಸ್ಸಾದಿಯವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಹೆಚ್ಚು ಸಲಹೆ ನಾನವರಿಂದ ಪಡೆದಿದ್ದೆ. ಯಾವಾಗಲೂ ಅವರಿಗೆ ಸಮಾಜದ ಹಲವು ಸಮುದಾಯಗಳ ಕುರಿತು ನ್ಯಾಯ ಒದಗಿಸಿಕೊಡಬೇಕೆನ್ನುವ  ಕಾಳಜಿ. ಪ್ರಮುಖವಾದ ಜವಾಬ್ದಾರಿಯುತ ಸ್ಥಾನದಲ್ಲಿ ಸರ್ಕಾರ ನೇಮಿಸಿದಾಗ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ತಾನು ಏನು ಎನ್ನುವುದನ್ನು ನಿರೂಪಿಸಿದ್ದಾರೆ. ಮುಜಾಫರ್ ಅಸ್ಸಾದಿಯವರಲ್ಲಿ ಕಿರಿಯರಿಗೆ ಉತ್ಸಾಹ ತುಂಬುತ್ತ, ಹಿರಿಯರಲ್ಲಿ ಸ್ನೇಹಭಾವ ತೋರುತ್ತ ಕೆಲಸ ಮಾಡುವ ಸ್ವಭಾವವನ್ನು ಕಂಡಿದ್ದೇನೆ. ರಾಯಚೂರು ನೂತನ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾಗಿ ನೇಮಕವಾಗಿದ್ದಾರೆ. ಬಹುದೊಡ್ಡ ಕೆಲಸ. ಹೆಚ್ಚು ಅನುಭವವುಳ್ಳವರು. ಅವರ ವ್ಯಕ್ತಿತ್ವಕ್ಕೆ ಅವರ ಸಾಮರ್ಥ್ಯಕ್ಕೆ ಚಳುವಳಿ ಜೊತೆ ಬೆರೆತಿರುವುದರಿಂದ ಸಮಸ್ಯೆಗಳನ್ನು ಪರಿಹರಿಸಲು ಮುಂದಾದವರು. ಸಮಸ್ಯೆಗಳು ಬಂದಾಗ ಧೃತಿಗೆಡದೇ ಪ್ರಭುದ್ಧತೆಯ ನೆಲೆಯಲ್ಲಿ ಆತಂಕದ ವಿದ್ಯಾಮಾನಗಳಲ್ಲಿ ಅರಗಿಸಿಕೊಂಡಿದ್ದರು. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಷ್ಟೇ ಅಲ್ಲ, ಅನ್ನದಾತರೂ ಕೂಡ ಹೌದು. ಅನೇಕ ಸವಾಲುಗಳನ್ನು ಸ್ವೀಕರಿಸಿ ನ್ಯಾಯ ಒದಗಿಸಿಕೊಟ್ಟಿದ್ದೀರಿ. ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ನಿಮ್ಮ ನಾಯಕತ್ವ ಅತ್ಯಗತ್ಯ ಎಂದರು.

ಇದೇ ವೇಳೆ ಪ್ರೊ.ಮುಜಾಫರ್ ಆಸ್ಸಾದಿ ದಂಪತಿಯನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ನಿವೃತ್ತ ಕುಲಪತಿ ಪ್ರೊ.ಮಂಜಪ್ಪ ಡಿ.ಹೊಸಮನಿ, ಅಧ್ಯಕ್ಷರು ಪ್ರೊ.ಜಿ.ಟಿ.ರಾಮಚಂದ್ರಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣ ಹೊಂಬಾಳ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಸ್)

Leave a Reply

comments

Related Articles

error: