ಕ್ರೀಡೆ

ಸಿರಿಂಜ್ ವಿವಾದ: ಇಂಡಿಯನ್ ಬಾಕ್ಸಿಂಗ್ ತಂಡಕ್ಕೆ ಕ್ಲೀನ್ ಚಿಟ್

ದೇಶ(ನವದೆಹಲಿ)ಏ.3:- ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಏಪ್ರೀಲ್ 4ರಿಂದ ಆರಂಭವಾಗುವ ಕಾಮನ್ ವೆಲ್ತ್ ಗೇಮ್ಸ್ ನ ಶುಭಾರಂಭಕ್ಕೂ ಮುನ್ನ ಭಾರತೀಯ ಅಥ್ಲೀಟ್ ನಿವಾಸದಲ್ಲಿ ದೊರಕಿದ ಸಿರಿಂಜ್ ಪ್ರಕರಣ ಕ್ಲೀನ್ ಚಿಟ್ ಪಡೆದುಕೊಂಡಿದೆ.

ಕಾಮನ್ ವೆಲ್ತ್ ಕ್ರೀಡಾಕೂಟದ ಭಾರತೀಯ ಆಟಗಾರರು ಮತ್ತು ವೈದ್ಯರು ಘಟನೆಯನ್ನು ಖಂಡಿಸಿದ್ದರು. ಏಪ್ರೀಲ್ ನಾಲ್ಕರಿಂದ ಕಾಮನ್ ವೆಲ್ತ್ ಶುಭಾರಂಭವಾಗಲಿದ್ದು, ಭಾರತೀಯ ಅಥ್ಲೀಟ್ ಹೌಸಿಂಗ್ ನಲ್ಲಿ ಕಂಡು ಬಂದ ಸಿರಿಂಜ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಶಿಫಾರಸು ಮಾಡಿದ ವೈದ್ಯರನ್ನು ಶಿಕ್ಷಿಸಲು ಬಲವಾದ ಲಿಖಿತ ದೂರು ನೀಡಬೇಕೆಂಬ ಆರೋಪ ಕೇಳಿ ಬಂದಿತ್ತು. (ಎಸ್.ಎಚ್)

Leave a Reply

comments

Related Articles

error: