
ಲೈಫ್ & ಸ್ಟೈಲ್
ಕೂದಲು ಉದುರದಂತೆ ತಡೆಯಲು ಶರೀರದಲ್ಲಿ ಕಬ್ಬಿಣದಂಶ ಹೆಚ್ಚಿಸಿಕೊಳ್ಳಿ
ಶರೀರದಲ್ಲಿ ಕಬ್ಬಿಣದ ಅಂಶದ ಕೊರತೆಯಿರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅನೇಕ ರೋಗಗಳಿಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ. ಅದರಲ್ಲೂ ತಲೆಯಲ್ಲಿನ ಕೂದಲುಗಳು ಕಡಿಮೆಯಾಗುತ್ತಿದ್ದರೆ ನಮ್ಮ ತಲೆ ಎಲ್ಲಿ ಬೋಳಾಗಿ ಅಸಹ್ಯವಾಗಿ ಕಾಣಿಸುವುದೇನೋ ಎನ್ನುವ ಭಯ ಎಲ್ಲರನ್ನೂ ಆವರಿಸಿರುತ್ತದೆ. ಶರೀರದಲ್ಲಿ ಕಬ್ಬಿಣದ ಅಂಶದ ಕೊರತೆ ಇದೆ ಎನ್ನುವುದು ನಮಗೆ ಈ ಮೂಲಕ ಅರಿವಿಗೆ ಬರಲಿದೆ.
ಪದೇ ಪದೇ ಶರೀರದ ಮೇಲೆ ಕೂದಲು ಬೀಳುತ್ತಿದ್ದರೆ ಕಬ್ಬಿಣದಂಶ ಕಡಿಮೆಯಾಗಿದೆ ಅಂತಲೇ ಅರ್ಥ. ನಿದ್ರೆ ಸರಿಯಾಗಿ ಆದಾಗಲೂ ವಿಪರೀತ ಸುಸ್ತು ಕಾಣಿಸುವುದು. ರಕ್ತದಲ್ಲಿ ಕಬ್ಬಿಣದಂಶ ಕಡಿಮೆಯಾಗುವುದರಿಂದ ಶರೀರದಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗತೊಡಗುತ್ತದೆ. ಇದರಿಂದ ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತದೆ.
ಕಾಲಿನ ಮಾಂಸಖಂಡಗಳಲ್ಲಿ ನೋವು, ಏನೋ ಹುಳ ಓಡಾಡಿದಂತಾಗುವುದು, ಉರಿ, ಕಾಲುಗಳಲ್ಲಿ ಶಕ್ತಿ ಇಲ್ಲದಿರುವಿಕೆ, ನಾಲಿಗೆಗಳಲ್ಲಿ ಮುಳ್ಳುಗಳೇಳುವುದು, ಮಾತನಾಡಲು ಕಷ್ಟವಾಗುವುದು, ಪದೇ ಪದೇ ತುಟಿಗಳಲ್ಲಿ ಬಿರುಕು, ಕುಳಿತಿರುವಲ್ಲೇ ಕಣ್ಣು ಮಂಜಾಗುವುದು, ತಲೆ ತಿರುಗುವುದು, ಐಸ್, ಮಣ್ಣು, ಚಾಕ್ ಪೀಸ್ ಗಳನ್ನು ತಿನ್ನಬೇಕೆಂಬ ಹಂಬಲ, ಪದೇ ಪದೇ ಉಗುರುಗಳು ತುಂಡಾಗುವುದು, ತ್ವಚೆ ಹಳದಿ ಬಣ್ಣಕ್ಕೆ ತಿರುಗುವುದು, ಕಬ್ಬಿಣದಂಶ ಕಡಿಮೆಯಾದ ಸಂಕೇತ ವಾಗಿದೆ.
ಶರೀರದಲ್ಲಿ ಕಬ್ಬಿಣದಂಶವನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ಸೇವಿಸಿ
ಒಂದು ಕಪ್ ಹಸಿರು ಕಡಲೆ. ಇದರಲ್ಲಿ 150ಗ್ರಾಂ ಕಬ್ಬಿಣದಂಶವಿರುತ್ತದೆ. 1ಕಪ್ ಬಲಿತ ಪಾಲಕ್ ಇದರಲ್ಲಿ 180ಗ್ರಾಂ, ಪಾಲಕ್ ನಲ್ಲಿ 6ರಿಂದ7 ಮಿಲಿಗ್ರಾಂ, 1ಕಪ್ ಬೇಯಿಸಿದ ಸೋಯಾಬಿನ್ ನಲ್ಲಿ 5ರಿಂದ 6ಮಿಲಿಗ್ರಾಂ, ಮಧ್ಯಮ ಗಾತ್ರದ ಒಂದು ಆಲೂಗಡ್ಡೆಯಲ್ಲಿ 2ರಿಂದ 3ಮಿಲಿಗ್ರಾಂ, ಡಾರ್ಕ್ ಚಾಕಲೇಟ್ ಇದರಲ್ಲಿ 6ಮಿಲಿಗ್ರಾಂ, ಕಬ್ಬಿಣದಂಶ ದೊರೆಯುತ್ತದೆ.
ಇವುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಂಡಲ್ಲಿ ಶರೀರದಲ್ಲಿ ಕಬ್ಬಿಣದಂಶ ಹೆಚ್ಚಲಿದೆ.