ದೇಶಪ್ರಮುಖ ಸುದ್ದಿ

ಎಸ್ಸಿ, ಎಸ್ಟಿ ಕಾಯಿದೆಗೆ ನಮ್ಮ ವಿರೋಧವಿಲ್ಲ: ಸುಪ್ರೀಂ

ನವದೆಹಲಿ,ಏ.3-ಎಸ್ಸಿ, ಎಸ್ಟಿ ಕಾಯಿದೆಗೆ ನಮ್ಮ ವಿರೋಧವಿಲ್ಲ. ನ್ಯಾಯಾಲಯದ ತೀರ್ಪನ್ನು ದಲಿತ ಸಂಘಟನೆಗಳವರು ಸರಿಯಾಗಿ ಓದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಎಸ್ಸಿ, ಎಸ್ಟಿ ಕಾಯಿದೆಯಡಿ ಅಮಾಯಕ ಸರ್ಕಾರಿ ಅಧಿಕಾರಿಗಳು ಅಥವಾ ಪೌರರು, ಯಾವುದೇ ರೀತಿಯಲ್ಲಿ ಪೂರ್ವ ಪರಿಶೀಲನೆಗೊಳಪಡದೆ, ಬಂಧನಕ್ಕೆ ಗುರಿಯಾಗುವುದನ್ನು ನಾವು ಬಯಸುವುದಿಲ್ಲ ಎಂಬ ಕಾರಣಕ್ಕೆ ಕಾಯಿದೆಯಲ್ಲಿನ ಕಾಠಿಣ್ಯವನ್ನು ನ್ಯಾಯಾಲಯ ಕುಂಠಿತಗೊಳಿಸಿದೆ. ಎಸ್ಸಿ/ಎಸ್ಟಿ ಕಾಯಿದೆಯನ್ನು ನಾವು ಮೇಲ್ನೋಟಕ್ಕೆ ಪುನರ್ವಿಮರ್ಶಿಸಲು ಬಯಸುವುದಿಲ್ಲ. ಆದರೆ ದಲಿತ ಸಂಘಟನೆಗಳು ನಮ್ಮ ತೀರ್ಪನ್ನು ಸರಿಯಾಗಿ ಓದಿರುವಂತೆ ಕಾಣುವುದಿಲ್ಲ ಎಂದು ಸುಪ್ರೀಂ ಹೇಳಿದೆ.

ಇದಕ್ಕೆ ಮೊದಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ, ಭಾರತ್ ಬಂದ್ ಪ್ರಯುಕ್ತ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಯ ದಳ್ಳುರಿಯಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ತಲೆದೋರಿದೆ. ಸಹಸ್ರಾರು ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ದೇಶಾದ್ಯಂತ 10 ಮಂದಿ ಅಸುನೀಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕೋಟಿಗಟ್ಟಲೆ ಆಸ್ತಿಪಾಸ್ತಿಗಳು ನಾಶಗೊಂಡಿವೆ. ಆದುದರಿಂದ ಸುಪ್ರೀಂ ಕೋರ್ಟ್ ತನ್ನ ಆದೇಶದ ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯ ಒದಗಿದೆ ಎಂದು ಹೇಳಿತ್ತು.

ಆ ಸಂದರ್ಭದಲ್ಲಿ ಕೋರ್ಟ್ ಮಾರ್ಗದರ್ಶಿ (ಆಯಮಿಕಸ್ ಕ್ಯೂರಿ) ಅಮರೇಂದ್ರ ಶರಣ್ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯ ಹೊಣೆಗಾರಿಕೆ ಸರ್ಕಾರದ್ದು ಎಂಬ ಅಟಾರ್ನಿ ಜನರಲ್ ಅವರ ವಾದವನ್ನು ವಿರೋಧಿಸಿದರು.

ಕಳೆದ ಮಾ.20 ರಂದು ಸುಪ್ರೀಂ ಕೋರ್ಟ್ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯಿದೆಯಡಿ ಅಮಾಯಕ ಸರ್ಕಾರಿ ನೌಕರರು ಮತ್ತು ನಾಗರಿಕರು ಪೂರ್ವ ಪರಿಶೀಲನೆಗೊಳಪಡದೆ ನೇರವಾಗಿ ಬಂಧನಕ್ಕೆ ಗುರಿಯಾಗುವುದು ಸರಿಯಲ್ಲ ಎಂದು ಕಾಯಿದೆಯ ಕಾಠಿಣ್ಯವನ್ನು ಕುಂಠಿತಗೊಳಿಸಿತ್ತು. (ಎಂ.ಎನ್)

Leave a Reply

comments

Related Articles

error: