ಸುದ್ದಿ ಸಂಕ್ಷಿಪ್ತ

ಏ.12-14ರವರೆಗೆ ರಿಟ್ರೀಟ್ ಫಾರ್ ಡಾಕ್ಟರ್ಸ್

ಮೈಸೂರು,ಏ.3 : ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್ಎಸ್ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ದತ್ತಿ ಟ್ರಸ್ಟ್ ಸಹಯೋಗದಲ್ಲಿ ಏ.12 ರಿಂದ 14ರವರೆಗೆ ಸುತ್ತೂರಿನಲ್ಲಿ ರಿಟ್ರೀಟ್ ಫಾರ್ ಡಾಕ್ಟರ್ಸ್ ಶಿಬಿರವನ್ನು ಆಯೋಜಿಸಿದೆ.

ಶ್ರೀಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು.

ಡಾ.ಜಯಪ್ರಕಾಶ್ ನಾಗತಿಹಳ್ಳಿ, ಕೆ.ಅನಂತರಾಮ್,ಡಾ.ಬಿ.ವಿ. ವಸಂತ ಕುಮಾರ್, ಕಬ್ಬಿನಾಲೆ ವಸಂತ ಭಾರಧ್ವಾಜ್, ಜಿ.ಏಸ್.ನಟೆಶ್, ಮೊದಲಾದ ಪರಿಣಿತರು ವಿಶೇಷ ಉಪನ್ಯಾಸ ಹಾಗೂ ಮೂರು ದಿನಗಳ ಕಾಲ.  ಸಿದ್ದೇಶ್ವರ ಸ್ವಾಮೀಜಿ ಪ್ರವಚನವಿರುವುದು. (ಕೆ.ಎಂ.ಆರ್)

Leave a Reply

comments

Related Articles

error: