ಸುದ್ದಿ ಸಂಕ್ಷಿಪ್ತ

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು, ಏ.4:- ಮೈಸೂರು ರೈಲು ನಿಲ್ದಾಣದ ವೇದಿಕೆ ನಂ.2 ಸ್ಟೇರ್‍ಕೇಸ್ ಹತ್ತಿರ ಏಪ್ರಿಲ್ 1 ರಂದು ಸುಮಾರು 40 ವರ್ಷದ ಗಂಡಸು ಮೃತಪಟ್ಟಿದ್ದಾರೆ.  ಕೊಕ್ಕರೆಹುಂಡಿ ಗ್ರಾಮದ ಬಲರಾಮ ಎಂಬುವರು ಮೈಸೂರು -ಬನ್ನೂರು ಮುಖ್ಯ ರಸ್ತೆ ಕಂಚಗಾರಕಟ್ಟೆ ಹಳ್ಳದ ಬಳಿ ಅಪರಿಚಿತ ಗಂಡಸಿನ ಶವ ಕಂಡುಬಂದಿದ್ದು, ಈ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಅಪರಿಚಿತ ವ್ಯಕ್ತಿಯ ಗುರುತು ಇಂತಿದೆ, ವಯಸ್ಸು- 40 ವರ್ಷ, ಎತ್ತರ 5 ಅಡಿ, ಕಪ್ಪು ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ, ಗುಂಡುಮೂಗು ಕಪ್ಪು ಕೂದಲು, ಮತ್ತು ಗೆರೆಯುಳ್ಳ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿರುತ್ತಾರೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: