
ಮೈಸೂರು
ಸಿಡಿಲಿನ ಹೊಡೆತಕ್ಕೆ ಮಸೀದಿಯ ಗೊಮ್ಮಟ ಹಾನಿ
ಮೈಸೂರು,ಏ.4:- ಮಸೀದಿಯ ಗೊಮ್ಮಟವು ಸಿಡಿಲಿನ ಹೊಡೆತಕ್ಕೆ ಹಾನಿಗೊಂಡ ಘಟನೆ ಗೌಸಿಯಾನಗರದಲ್ಲಿ ನಡೆದಿದೆ.
ನಿನ್ನೆ ಸಂಜೆ ಬಡಿದ ಸಿಡಿಲಿಗೆ 50ಕ್ಕೂ ಹೆಚ್ಚು ಮನೆಗಳ ಟಿ.ವಿ.ಗಳಿಗೆ ಹಾನಿಯುಂಟಾಗಿದೆ.150ಕ್ಕೂ ಹೆಚ್ಚು ಸೆಟಾಪ್ ಬಾಕ್ಸ್ ಗಳು ಹಾನಿಗೊಳಗಾಗಿವೆ. ಮೈಸೂರಿನ ಗೌಸಿಯಾ ನಗರದ ಅಬೂಬಕರ್ ಮಸೀದಿಯ ಗೊಮ್ಮಟ(ಮಿನಾರ್) ಹಾನಿಗೊಂಡಿದೆ. ಹೆಚ್.ಸಿ.ಜಿ.ರಸ್ತೆಯಲ್ಲಿರುವ ಮನೆಗಳ ಟಿವಿ ಗಳು ಹಾಗೂ ಸೆಟಾಪ್ ಬಾಕ್ಸ್ ಗಳಿಗೆ ಕೂಡ ಹಾನಿಯುಂಟಾಗಿದೆ. (ಕೆ.ಎಸ್,ಎಸ್.ಎಚ್)