ಪ್ರಮುಖ ಸುದ್ದಿಮೈಸೂರು

ಒಕ್ಕಲಿಗ ಸಮಾಜದ ಕೆಲವು ಮುಖಂಡರನ್ನು ಬಿಟ್ಟು ಸಿದ್ದರಾಮಯ್ಯ ನಮ್ಮ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ : ಹೆಚ್.ಡಿ.ಕುಮಾರಸ್ವಾಮಿ ಆರೋಪ

ಮೈಸೂರು,ಏ.4:- ಕಾಂಗ್ರೆಸ್ ಪಕ್ಷದ ಬಹಳಷ್ಟು ಮುಖಂಡರು ಜೆಡಿಎಸ್ ಸೇರಿದ್ದಾರೆ. ಒಕ್ಕಲಿಗ ಸಮಾಜದ ಕೆಲವು ಮುಖಂಡರನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ನಮ್ಮ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತಿ ಮುಖಂಡರನ್ನು ಬಿಟ್ಟು ಒಡೆದು ಆಳುವ ನೀತಿ ಅನುಸರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ವರುಣಗೆ ಹೋದ ಸಿದ್ದರಾಮಯ್ಯ ಪಲಾಯನ ಮಾಡಿದ್ದರು. ಈಗ ಮತ್ತೆ ಇದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಮತ್ತೆ ಪಲಾಯನ ಮಾಡಿದ್ದಾರೆ. ಮಗನಿಗೆ ದಾರಿ ಮಾಡಿಕೊಡಲು ವರುಣ ಬಿಟ್ಟು ಚಾಮುಂಡೇಶ್ವರಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿ ಮೇಲೆ ಹಲ್ಲೆ ಮಾಡಿದ ಮರಿಗೌಡ ನನಗೆ ಗೊತ್ತಿಲ್ಲ ಅಂತ ಹೇಳಿದ ಸಿದ್ದರಾಮಯ್ಯ ಈಗ ಅದೇ ಮರಿಗೌಡನನ್ನು ಬಾಡಿಗಾರ್ಡ್ ಆಗಿ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದರು. ರಾಜಕೀಯ ಆರಂಭ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸಿದ್ದರಾಮಯ್ಯನವರ ರಾಜಕೀಯ ಅಂತ್ಯವಾಗುತ್ತದೆ. ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಬ್ಬರೂ ಮನೆಗೆ ಹೋಗುವುದು ನಿಶ್ಚಿತ. ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಸ್ಪರ್ಧೆ ಮಾಡುತ್ತಿಲ್ಲ. ಮಗನಿಗೆ ಕ್ಷೇತ್ರ ಬಿಟ್ಟುಕೊಡಲು ಚಾಮುಂಡೇಶ್ಚರಿಗೆ ಬಂದಿದ್ದಾರೆ.ಚಾಮುಂಡೇಶ್ವರಿ, ವರುಣಾ ಕ್ಷೇತ್ರಗಳಿಂದ ಮತದಾರ ಅಪ್ಪ ಮಕ್ಕಳನ್ನು ಮನೆಗೆ ಕಳುಹಿಸುತ್ತಾರೆ. ನಾನಾಗಲಿ,ಜಿ.ಟಿ.ದೇವೇಗೌಡ ಆಗಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ ಎಂದು ಹೇಳುತ್ತಿಲ್ಲ. ಜನರು ಸಿದ್ದರಾಮಯ್ಯ, ಯತೀಂದ್ರ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಜಿ.ಟಿ.ದೇವೇಗೌಡ ಮೇಲೆ ಎಸಿಬಿ ಬಿಟ್ಟು ಗದಾ ಪ್ರಹಾರ ನಡೆಸಿದರು. ನಾನು ಆವಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದ್ದೆ ಎಂದರು. ನಂಜನಗೂಡು,ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕದ ವಿಚಾರಕ್ಕೆ  ಪ್ರತಿಕ್ರಿಯಿಸಿ ಪೊಲಿಟಿಕಲ್ ಸ್ಟ್ಯಾ ಟರ್ಜಿಯಿಂದ ಅಭ್ಯರ್ಥಿ ಹಾಕಿಲ್ಲ ಅಷ್ಟೇ . ಸಿದ್ದರಾಮಯ್ಯ ಉಪ ಚುನಾವಣೆ ಗೆದ್ದಿದ್ದು ಸರ್ಕಾರದ ಅಭಿವೃದ್ಧಿಯಿಂದ ಅಲ್ಲ. ವಾಮ ಮಾರ್ಗದ ಮೂಲಕ ಚುನಾವಣೆ ಗೆದ್ದರು ಎಂದು ಅವರ ಸಚಿವರೇ ಹೇಳಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ  ಶಾಸಕ ಜಿ.ಟಿ.ದೇವೇಗೌಡ, ಶರವಣ ಸೇರಿದಂತೆ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: